ಬದಿಯಡ್ಕ: ತುಳುನಾಡಿನ ಹಿರಿಯ ಸಾಹಿತಿ, ಸಂಶೋಧಕ, ತುಳುಲಿಪಿ ಬ್ರಹ್ಮ ಡಾ.ಪಿ. ವೆಂಕಟರಾಜ ಪುಣಿಂಚಿತ್ತಾಯರ ಜನ್ಮದಿನದ ಸಂದರ್ಭದಲ್ಲಿ ಕೇರಳ ತುಳು ಅಕಾಡೆಮಿಯಿಂದ ಪುಣಿಂಚಿತ್ತಾಯರ ಹೆಸರಿನಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಕವಿ, ಸಂಘಟಕ, ಅಂಬೇಡ್ಕರ್ ವಿಚಾರವೇದಿಕೆಯ ಸಂಚಾಲಕ ಸುಂದರ ಬಾರಡ್ಕ ಅವರಿಗೆ ಅಂಬೇಡ್ಕರ್ ವಿಚಾರವೇದಿಕಯು ಅಭಿನಂದನೆಗಳನ್ನು ಸಲ್ಲಿಸಿದೆ.
ಮಂಜೇಶ್ವರ ದುರ್ಗಿಪಳ್ಳದಲ್ಲಿ ಅಕಾಡೆಮಿಯ ತುಳು ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಸಿ.ಎಚ್. ಕುಂಞಂಬು ಸುಂದರ ಬಾರಡ್ಕರನ್ನು ಸನ್ಮಾನಿಸಿದ್ದರು. ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯರಚನೆ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡ ಸುಂದರ ಬಾರಡ್ಕರವರು ಕವನಸಂಕಲ, ಕಥಾಸಂಕಲನ, ಜಾನಪದ ಕೃತಿಗಳನ್ನು ಹೊರತಂದಿದ್ದಾರೆ. ಪತ್ರಕರ್ತರಾಗಿಯೂ ದುಡಿದ ಅನುಭವ ಅವರಿಗಿದೆ. ಪುಣಿಂಚತ್ತಾಯರ ಹೆಸರಿನಲ್ಲಿ ಅವರಿಗೆ ಲಭಿಸಿದ ಸನ್ಮಾನವು ಅವರ ಸಾಧನೆಗೆ ಸಂದ ಮಾನ್ಯತೆಯಾಗಿದೆ ಎಂದು ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬದಿಯಡ್ಕದ ಸಮತಾ ಸಾಹಿತ್ಯವೇದಿಕೆಯೂ ಅವರನ್ನು ಅಭಿನಂದಿಸಿದೆ.