ಕಾಸರಗೋಡು: ಕೋವಿಡ್ ಸೋಂಕಿನ ಸನ್ನಿವೇಶದಲ್ಲಿ ವಿಭಿನ್ನ ಶೈಲಿಯ ಅತ್ಯಂತ ಹೆಚ್ಚು ಜನಾಕರ್ಷಣೆ ಪಡೆದಿರುವ ಜಾಗೃತಿ ವೀಡಿಯೋ ಸಂಚಿಕೆ 'ಮೋಟಸ್' 53 ಸಂಚಿಕೆಗಳನ್ನು ಈಗಾಗಲೇ ಪೂರೈಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಮೋಟೂಸ್ ಕಾರ್ಯಕ್ರಮದ ನಿರೂಪಕ ಬಾಲಕನಾದ ದೇವರಾಜ್ ಕಕ್ಕತ್ ಅವರನ್ನು ಅಭಿನಂದಿಸಲು ಸ್ವತಃ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ದೇವರಾಜ್ ಅವರ ಮನೆಗೆ ಭೇಟಿ ನೀಡಿದರು.
ಅನಿರೀಕ್ಷಿತವಾಗಿ ಜಿಲ್ಲಾಧಿಕಾರಿಗಳು ತನ್ನ ಮನೆಗೇ ಆಗಮಿಸಿದಾಗ ಬಾಲಕ ದೇವರಾಜ್ ಮೊದಲು ಗಾಬರಿಗೊಳಗಾದ. ಬಾಲಕನ ಅಪ್ರತಿಮ ಕೊಡುಗೆಯ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಮೆಚ್ಚುಗೆ ಸೂಚಿಸಿ ಭೇಟಿ ನೀಡುವ ಬಗ್ಗೆ ತಿಳಿಸಿದ್ದರೂ ಭೇಟಿಯಾಗಿರಲಿಲ್ಲ. ಮಡಿಕೈ ಗ್ರಾ.ಪಂ. ವ್ಯಾಪ್ತಿಯ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗಲು ಬುಧವಾರ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಮೋಟೋಸ್ ಸಾಧಕನನ್ನು ಜಿಲ್ಲಾಧಿಕಾರಿ ನೆನಪಿಸಿಕೊಂಡರು. ಹಾಗಾಗಿ ನೇರವಾಗಿ ಹೋಗಿ ಅಭಿನಂದಿಸಲು ನಿರ್ಧರಿಸಿದರು. ಮೋಟೂಸ್ ನಟನೆ ಕಾರ್ಟೂನ್ ಪಾತ್ರಗಳನ್ನು ಸೋಲಿಸಿದೆ ಎಂದು ಜಿಲ್ಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಸಾಮಾಜಿಕ ಬದ್ದತೆ:
ದೇವರಾಜ್ ಮಡಿಕೈ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆಯ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ದೇವರಾಜ್ ಕಾಂಜಿರಪೆÇಯಿಲ್ ಪ್ರೌಢ ಶಾಲಾ ಶಿಕ್ಷಕ ಕೆ.ವಿ.ರಾಜೇಶ್ ಮತ್ತು ಮಡಿಕೈ ಕಕ್ಕಾಟ್ ರೀಜಾ ದಂಪತಿಗಳ ಪುತ್ರ. ದೇವರಾಜನ ಕಲ್ಪನೆಯ ಕೂಸಾಗಿ ಆವಿರ್ಭವಿಸಿದ ಮೋಟೋನ 53 ಕಂತುಗಳು ವಿಭಿನ್ನ ದೃಷ್ಟಿಕೋನಗಳೊಂದಿಗೆ ಸಮಾಜದ ಮುಂದಿರಿಸಲ್ಪಟ್ಟು ಗಮನಾರ್ಹವಾಗಿದೆ. ಮಡಿಕೈ ಪಂಚಾಯತಿ ಅಧ್ಯಕ್ಷ ಸಿ.ಪ್ರಭಾಕರನ್ ಮತ್ತು ಉಪಾಧ್ಯಕ್ಷೆ ಕೆ. ಪ್ರಮೀಳಾ ಜಿಲ್ಲಾಧಿಕಾರಿಗಳ ಜೊತೆ ಇದ್ದರು. ಜಿಲ್ಲಾಧಿಕಾರಿಗಳು ಸುಮಾರು ಹದಿನೈದು ನಿಮಿಷಗಳ ಕಾಲ ಮನೆಯವರೊಂದಿಗೆ ಸಂವಹನ ನಡೆಸಿದರು. ಮೋಟೂಸ್ ಜಾಗೃತಿ ಪರಿಕಲ್ಪನೆಯನ್ನು ಇನ್ನಷ್ಟು ಬಲಪಡಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿ ಹಾರೈಸಿದರು.
ಕೋವಿಡ್ ಜಾಗೃತಿ ಮೂಡಿಸುವುದು ಗುರಿ:
ಜೀವಹಾನಿಗೆ ಕಾರಣವಾದ ಕೋವಿಡ್ ಸೋಂಕಿನ ತಡೆಗಟ್ಟುವಿಕೆಯ ಜಾಗೃತಿ, ಕೈ ತೊಳೆಯುವುದು, ಸಾಮಾಜಿಕ ದೂರವನ್ನು ಇಟ್ಟುಕೊಳ್ಳುವುದು, ಆರೋಗ್ಯ ಇಲಾಖೆ, ಕಾನೂನು ಜಾರಿ, ಮಾಧ್ಯಮ ಕಾರ್ಯಕರ್ತರು ಮತ್ತು ಇತರ ಸ್ವಯಂಸೇವಕರನ್ನು ಅಭಿನಂದಿಸುವಲ್ಲಿ ಮೋಟೂಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಸತತ 53 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದಾರೆ. ಸಿಮೆಂಟ್, ಕಲ್ಲುಮಣ್ಣು ಮತ್ತು ಕಲ್ಲಿನಿಂದ ಮಾಡಿದ ರಾಜೇಶ್ ಅವರ ಸ್ವಂತ ಶಿಲ್ಪ ಉದ್ಯಾನ ಇದರ ಚಿತ್ರೀಕರಣಕ್ಕೆ ಅನಾಯಾಸವಾಗಿ ದೊರಕಿದೆ. ಕ್ಯಾಮೆರಾ, ಕಥಾ ಸಂಪಾದನೆ ಮತ್ತು ನಿರ್ದೇಶನವನ್ನು ದೇವರಾಜ್ ಗೆ ಸ್ವತಃ ತಂದೆ ನೀಡಿದ್ದಾರೆ. ಸಹೋದರಿ ದೇವಿಕಾ ರಾಜ್ ತಾಂತ್ರಿಕ ನೆರವು ನೀಡಿದ್ದಾಳೆ.
ಅಭಿನಂದನೆಗಳ ಮಹಾಪೂರ:
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಮತ್ತು ಕಂದಾಯ ಸಚಿವ ಇ ಚಂದ್ರಶೇಖರನ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ದೇವರಾಜ್ ಅವರ ಅನುಕರಣೀಯ ಕಾರ್ಯಗಳಿಗಾಗಿ ಶ್ಲಾಘಿಸಿರುವರು. 25 ಸಂಚಿಕೆಗಳ ಕೊನೆಯಲ್ಲಿ ತನ್ನ ವೀಡಿಯೋ ಜಾಗೃತಿಯಿಂದ ದೊರಕಿದ ತನ್ನ ಉಳಿತಾಯವನ್ನು ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ನೀಡಿದ್ದ. ಮಾಜಿ ಸಂಸದ ಕರುಣಾಕರನ್ ಅವರು ಮನೆಗೆ ಭೇಟಿ ನೀಡಿ 50 ನೇ ಸಂಚಿಕೆಯಲ್ಲಿ ಅಭಿನಂದಿಸಿದ್ದರು.