ಕುಂಬಳೆ: ಯುವ ಕವಯಿತ್ರಿ ಪರಿಣಿತ ರವಿ ಎಡನಾಡು ಅವರ ಯಶಸ್ವಿ ನಾಲ್ಕನೇ ಕೃತಿ "ಯಶೋಗಾಥೆ" ಇಂದು ಸಂಜೆ 4ಕ್ಕೆ ಝೂಮ್ ಆಫ್ ಮೂಲಕ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಲಿದೆ.
ನಿವೃತ್ತ ಪ್ರಾಧ್ಯಾಪಕಿ, ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವೆಬಿನಾರ್ ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಕೃತಿ ಬಿಡುಗಡೆಗೊಳಿಸುವರು. ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕೃತಿ ಪರಿಚಯ ನೀಡುವರು.
ಈಗಾಗಲೇ ಮೌಲ್ಯಯುತ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿರುವ ಪರಿಣಿತ ರವಿ ಅವರು ಸುಪ್ತ ಸಿಂಚನ(ಕವನ ಸಂಕಲನ), ವಾತ್ಸಲ್ಯ ಸಿಂಧು(ಕಥಾಸಂಕಲನ), ಭಾವ ಬಿಂದು(ಚುಟುಕು ಸಂಕಲನ)ಗಳನ್ನು ಬರೆದು ಭರವಸೆ ಮೂಡಿಸಿದ್ದಾರೆ. ಕೊಚ್ಚಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಸಂಶೋಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ.ಇಂದು ಸಂಜೆ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭ ಝೂಮ್ ಆಫ್ ಲಿಂಕ್ ಇಲ್ಲಿದೆ. Join Zoom Meeting