ಮುಂಬೈ: ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐಗೆ ಯುದ್ಧ ವಿಮಾನಗಳ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ಎಎಲ್) ಉದ್ಯೋಗಿ ದೀಪಕ್ ಶಿರ್ಸತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ 41 ವರ್ಷದ ದೀಪಕ್ ಶಿರ್ಸತ್ ನನ್ನು ಬಂಧಿಸಿದೆ. ದೀಪಕ್ ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
ಬಂಧಿತ ದೀಪಕ್ ಶಿರ್ಸತ್ ಬಳಿಯಿದ್ದ ಮೂರು ಮೊಬೈಲ್ ಫೋನ್, ಐದು ಸಿಮ್ ಕಾರ್ಡ್ ಮತ್ತು ಎರಡು ಮೊಮೋರಿ ಕಾರ್ಡ್ ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ ಎಂದು ಡಿಸಿಪಿ ವಿನಯ್ ರಾಥೋಡ್ ಮಾಹಿತಿ ನೀಡಿದ್ದಾರೆ.
ಭಾರತೀಯ ಯುದ್ಧ ವಿಮಾನ ಮತ್ತು ಅವುಗಳ ಉತ್ಪಾದನಾ ಘಟಕದ ಬಗ್ಗೆ ಗೌಪ್ಯ ಮಾಹಿತಿಯನ್ನು ದೀಪಕ್ ಶಿರ್ಸತ್ ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಐಎಸ್ಐಗೆ ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ.