HEALTH TIPS

ರಾಜ್ಯದಲ್ಲಿ ಮತ್ತೆ ಕಾನೂನು ಬಿಗು-ಜನ ಗುಂಪು ಸೇರುವುದಕ್ಕೆ ನಿಷೇಧ: ಸರ್ಕಾರದ ಆದೇಶ

      ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರಗತಿಯ ಏರುವಿಕೆಯತ್ತ ಸಾಗುತ್ತಿರುವುದರಿಂದ ಸರ್ಕಾರ ನಿರ್ಬಂಧಗಳನ್ನು ಕಠಿಣಗೊಳಿಸಿದೆ. ಐದಕ್ಕಿಂತ ಹೆಚ್ಚು ಜನರು ಜಮಾಯಿಸಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ತಕ್ಷಣ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಹೊಸ ನಿರ್ಬಂಧಗಳು ಈ ತಿಂಗಳ 31 ರವರೆಗೆ ಜಾರಿಯಲ್ಲಿರಲಿದೆ. 

        ಆಯಾ ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಮತ್ತು ಮುಂದಿನ ಕ್ರಮ ಜರಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಆದೇಶವು ಸಿಆರ್ಪಿಸಿ 144 ಗೆ ಅನುಗುಣವಾಗಿರುತ್ತದೆ. ವಿವಾಹ ಸಮಾರಂಭಕ್ಕೆ 50 ಜನರು ಹಾಜರಾಗಬಹುದು ಮತ್ತು 20 ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಸೂಚಿಸಲಾಗಿದೆ.

        ರಾಜ್ಯದಲ್ಲಿ ಕೋವಿಡ್ ಹರಡುವಿಕೆಯು ತೀವ್ರವಾಗಿ ಮುಂದುವರಿದಿರುವುದರಿಂದ ನಿಯಂತ್ರಣವನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. ಸಾಮಾಜಿಕ ದೂರವನ್ನು ಕಾಯ್ದುಕೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕ್ರಮ ಕೈಗೊಳ್ಳದ ಅಂಗಡಿ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹೇಳಿರುವರು.

      ಸಂಬಂಧಪಟ್ಟವರು ವಿವಿಧ ಕಾರ್ಯಗಳಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕಾರ್ಯಗತಗೊಳಿಸಲು ಜವಾಬ್ದಾರರಾಗಿರುತ್ತಾರೆ.  ಅಂತಹ ವಿಷಯಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ನಿಲುವು ತಳೆಯಬೇಕು.  ಅದಕ್ಕಾಗಿ ಪ್ರತಿ ಪ್ರದೇಶದ ಚಟುವಟಿಕೆಗೆ ಮತ್ತು ಕಾನೂನು ಪಾಲನೆಗೆ  ಹೊಸಬರನ್ನು ನೇಮಕಗೊಳಿಸಲಾಗುತ್ತದೆ. ರಾಜ್ಯ ಸರ್ಕಾರಿ ಸೇವೆಯಲ್ಲಿ ಗೆಜೆಟೆಡ್ ಅಧಿಕಾರಿ ಹುದ್ದೆಯನ್ನು ಹೊಂದಿರುವವರಿಗೆ ಪಂಚಾಯತ್ ಮತ್ತು ಮಹಾನಗರ ಪಾಲಿಕೆಗಳಲ್ಲಿ ಇಂತಹ ವಿಷಯಗಳ ಉಸ್ತುವಾರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವರು.

      ಇದೇ ವೇಳೆ ಕೋವಿಡ್ ನಿನ್ನೆ ಕೇರಳದಲ್ಲಿ 8,135 ಮಂದಿಯಲ್ಲಿ ದೃಢಪಟ್ಟು ಆತಂಕ ಮೂಡಿಸಿದೆ.  ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಇದುವರೆಗೆ ಎರಡು ಲಕ್ಷ ದಾಟಿದೆ. ರಾಜ್ಯದಲ್ಲಿ ನಿನ್ನೆ 29 ಸಾವುಗಳು ಸಂಭವಿಸಿವೆ. ಕೋವಿಡ್ ಸೋಂಕಿಂದ 2,828 ಜನರು ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 7,013 ಜನರಿಗೆ ನಿನ್ನೆ ಕೋವಿಡ್ ಸೋಂಕು ತಗಲಿತ್ತು. 730 ಜನರಲ್ಲಿ ರೋಗದ ಮೂಲ ಸ್ಪಷ್ಟವಾಗಿಲ್ಲ. 24 ಗಂಟೆಗಳಲ್ಲಿ 59,157 ಮಾದರಿಗಳನ್ನು ಪರೀಕ್ಷಿಸಲಾಯಿತು. ಪ್ರಸ್ತುತ 72332 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries