ಬೆಂಗಳೂರು: ಮಾದಕವಸ್ತು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಬಿನೀಶ್ ಕೊಡಿಯೇರಿಯನ್ನು ಭೇಟಿಯಾಗಲು ತೆರಳಿದ್ದ ಸಹೋದರ ಬಿನೊಯ್ ಕೊಡಿಯೇರಿ ಸಹೋದರನ ಭೇಟಿಯನ್ನು ಅಧಿಕಾರಿಗಳು ನಿರಾಕರಿಸಿದ್ದು ಬಳಿಕ ಬಿನೋಯ್ ಮರಳಿದ ಘಟನೆ ಇಮದು ನಡೆದಿದೆ.
ಸಹೋದರನನ್ನು ಭೇಟಿಯಾಗಲು ಅರ್ಧ ಘಂಟೆಯವರೆಗೆ ಕಾದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ. ಬಳಿಕ ವಕೀಲರು ಮತ್ತು ನ್ಯಾಯಾಧೀಶರೊಂದಿಗೆ ಮಾತಿನ ಚಕಮಕಿಯ ನಡೆಯಿತು. ಈ ವೇಳೆ ಇಡಿ ಅಧಿಕಾರಿಗಳು ಪೆÇಲೀಸರನ್ನು ಕರೆಸಿದರು. ಇದರೊಂದಿಗೆ ಬಿನೊಯ್ ಕೊಡಿಯೇರಿ ತನ್ನ ಸಹೋದರನನ್ನು ಭೇಟಿಯಾಗದೆ ಹಿಂದಿರುಗಿದ.
ಬಂಧಿತನನ್ನು ತೋರಿಸಲು ಯಾವುದೇ ಕಾನೂನು ಅವಕಾಶವಿಲ್ಲ ಮತ್ತು ಸೋಮವಾರ ಅವರನ್ನು ನ್ಯಾಯಾಲಯದಲ್ಲಿ ನೋಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಯನ್ನು ನಿನ್ನೆ ಪೆÇಲೀಸರು ಬಂಧಿಸಿದ್ದರು. ಬೆಂಗಳೂರು ಮಾದಕವಸ್ತು ಪ್ರಕರಣದಲ್ಲಿ ಮೂರೂವರೆ ಗಂಟೆಗಳ ವಿಚಾರಣೆಯ ನಂತರ ಬಿನೀಶ್‍ನನ್ನು ಅಂತಿಮವಾಗಿ ಬಂಧಿಸಲಾಗಿತ್ತು.
ಡ್ರಗ್ಸ್ ಪ್ರಕರಣದ ಆರೋಪಿ ಮೊಹಮ್ಮದ್ ಅನೂಪ್ ಬಿನೀಶ್ ನ ಸ್ನೇಹಿತ ಹಾಗೂ ನಿಕಟ ವ್ಯವಹಾರದಲ್ಲಿರುವವ ಎಂದು ವರದಿಯಾಗಿದೆ. ಇವರಿಬ್ಬರ ನಡುವೆ ಭಾರಿ ಹಣಕಾಸಿನ ವಹಿವಾಟು ನಡೆದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.