ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ನಿಷೇಧ ಘೋಷಿಸಲಾಗಿದೆ. ಎರ್ನಾಕುಳಂ, ತಿರುವನಂತಪುರ, ಕೋಝಿಕ್ಕೋಡ್ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪೂರ್ಣ ನಿಷೇಧಾಜ್ಞೆ ಇರಲಿದೆ. ನಿಯಂತ್ರಣ ಶನಿವಾರದಿಂದ ಜಾರಿಗೆ ಬರುತ್ತಿದೆ. ನಿಷೇಧವು ಒಂದು ತಿಂಗಳ ಕಾಲ ಇರಲಿದೆ.
ಮಿಕ್ಕುಳಿದಂತೆ ಕಂಟೋನ್ಮೆಂಟ್ ವಲಯಗಳ ಒಳಗೆ ಮತ್ತು ಹೊರಗೆ ಜನರು ಒಟ್ಟುಗೂಡಬಾರದು. ಐದು ಕ್ಕೂ ಹೆಚ್ಚು ಜನರ ಗುಂಪುಗಳನ್ನು ನಿಷೇಧಿಸಲಾಗಿದೆ. ಅಂಗಡಿಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳು ಮುಕ್ತವಾಗಿರುತ್ತವೆ. ಲೋಕಸೇವಾ ಆಯೋಗ ಸಹಿತ ಇತರ ಪರೀಕ್ಷೆಗಳನ್ನು ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ.
ಅಂತ್ಯಕ್ರಿಯೆಯಲ್ಲಿ 20 ಜನರು ಮತ್ತು 50 ಜನರು ಮದುವೆಗೆ ಹಾಜರಾಗಬಹುದು. ಸರ್ಕಾರಿ ಮತ್ತು ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗಲು 20 ಕ್ಕೂ ಹೆಚ್ಚು ಜನರಿಗೆ ಅವಕಾಶವಿಲ್ಲ. ಸ್ಥಳೀಯ ಅಧಿಕಾರಿಗಳು ಮತ್ತು ಪೆÇಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವರು. ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಇತರ ಅಂಗಡಿಗಳಲ್ಲಿ ಐದು ಕ್ಕೂ ಹೆಚ್ಚು ಜನರು ಗುಂಪುಗೂಡಿರುವುದು ಕಂಡುಬಂದಲ್ಲಿ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಸಾರ್ವಜನಿಕ ಸಾರಿಗೆ, ಕಚೇರಿಗಳು, ಅಂಗಡಿಗಳು, ರೆಸ್ಟೋರೆಂಟ್‍ಗಳು, ಕೆಲಸದ ಸ್ಥಳಗಳು, ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಚಟುವಟಿಕೆಗಳನ್ನು ಬ್ರೇಕ್ ದಿ ಚೈನ್ ಮಾರ್ಗಸೂಚಿಗಳು ಮತ್ತು ಸಾಮಾಜಿಕ ಅಂತರಕ್ಕೆ ಅನುಸಾರವಾಗಿ ಕಟ್ಟುನಿಟ್ಟಾದ ನಿಬಂಧನೆಗಳ ಅಡಿಯಲ್ಲಿ ಮಾತ್ರ ನಡೆಸಬೇಕು. ಜನಸಂದಣಿಯ ಮಾರುಕಟ್ಟೆಗಳಂತಹ ಸ್ಥಳಗಳಲ್ಲಿ ನಿಯಮಿತವಾಗಿ ಸ್ವಚ್ಚತಾ ಕಾರ್ಯವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ವ್ಯವಸ್ಥೆಗೊಳಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿರುವರು.