ಕಾಸರಗೋಡು: ಕಣ್ಣೂರಿನಲ್ಲಿ ವಾಸಿಸುತ್ತಿರುವ ಪುಷ್ಪನ್ ಅವರ ಸಹೋದರ ಬಿಜೆಪಿಗೆ ಸೇರಿದ ಬೆನ್ನಿಗೆ ದೇಲಂಪಾಡಿಯ ರವೀಂದ್ರ ರಾವ್ ಅವರ ಪತ್ನಿ ಭಾರತಿ ಕಾಸರಗೋಡಿನ ಹುತಾತ್ಮರು ಮತ್ತು ಅವರ ಕುಟುಂಬ ಬಿಜೆಪಿಗೆ ಸೇರಿದರು. ಇದೇ ವೇಳೆ ಅಡೂರಿನ ಸಿಪಿಎಂ ಕಾರ್ಯಕರ್ತೆ ನಳಿನಾಕ್ಷಿ ಬಿಜೆಪಿಗೆ ಸೇರಿದ್ದಾರೆ. ಸಿಪಿಎಂ ತೊರೆದವರನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯೆ ಪ್ರಮೀಳಾ ಸಿ ನಾಯಕ್ ಬರಮಾಡಿಕೊಂಡರು. ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಮನುಲಾಲ್ ಮೇಲತ್ ಮತ್ತು ಮೀಡಿಯಾ ಸೆಲ್ ಸಂಯೋಜಕ ಎನ್ ಬಾಬುರಾಜ್ ಉಪಸ್ಥಿತರಿದ್ದರು.
ಸಿಪಿಎಂ ನಾಯಕತ್ವ ಸಹಾಯ ಮಾಡಿಲ್ಲ...:
ರವೀಂದ್ರ ರಾವ್ ಅವರ ಪತ್ನಿ ಇನ್ನೂ ಆಸ್ತಿ-ಪಾಸ್ತಿಗಳನ್ನು ಪಡೆದಿಲ್ಲ. ಕೌಟುಂಬಿಕ ಆಸ್ತಿಯಲ್ಲಿ ಅವರವರ ಜಮೀನನ್ನು ಹಂಚಲು ಪಕ್ಷವನ್ನು ಸಂಪರ್ಕಿಸಲಾಗಿತ್ತು. ಆದರೆ ವರ್ಷಗಳು ಒಂದು ಕಳೆದರೂ ಅನುಕೂಲಕರ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಭಾರತಿ ಮತ್ತು ಅವರ ಕುಟುಂಬಕ್ಕೆ ಮನೆ ಮಾತ್ರ ಲಭ್ಯವಾಗಿದೆ. ಕುಟುಂಬವು ಹತಾಶೆಯಿಂದ ಬಿಜೆಪಿಯನ್ನು ಸಂಪರ್ಕಿಸಿದೆ ಎಂದು ರಾಷ್ಟ್ರೀಯ ಪರಿಷತ್ ಸದಸ್ಯೆ ಪ್ರಮೀಳಾ ಸಿ ನಾೈಕ್ ಹೇಳಿದ್ದಾರೆ.
ನಾಯಕತ್ವವನ್ನು ನಿಷೇಧಿಸಿ:
ರಾಜ್ಯಾದ್ಯಂತ ಸ್ಥಳಿಯಾಡಳಿತ ಚುನಾವಣೆ ದಿನ ಗಣನೆಯಲ್ಲಿರುವಂತೆ ಸಿಪಿಎಂನಿಂದ ಬಿಜೆಪಿಗೆ ಕಾರ್ಯಕರ್ತರು ಪಕ್ಷಾಂತರಗೈಯ್ಯುತ್ತಿರುವುದು ಸಿಪಿಎಂ ನಾಯಕತ್ವವನ್ನು ಎಚ್ಚರಿಸಿದೆ. ಕಣ್ಣೂರಿನಲ್ಲಿ ನಡೆದ ಕೂತ್ತುಪರಂಬ್ ನ ಹುತಾತ್ಮರಾದ ಪುಷ್ಪನ್ ಅವರ ಸಹೋದರ ಚೋಕ್ಲಿಯ ಪಿ.ಸಾಸಿ ಕೂಡ ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಿಗೆ ಕಾಸರಗೋಡಿನ ಸಿಪಿಎಂನ ಹುತಾತ್ಮ ರವೀಂದ್ರ ರಾವ್ ಅವರ ಕುಟುಂಬವೂ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನಲಾಗಿದೆ.
2011 ಮೇ 13 ರಂದು ದಿವಂಗತ ಶ್ರೀನಿವಾಸ ರಾವ್ ಮತ್ತು ಕಮಲಾ ದಂಪತಿಗಳ ಪುತ್ರ ರವೀಂದ್ರ ರಾವ್ ಅವರನ್ನು ಕಾಂಗ್ರೆಸ್ಸಿಗರು ಗುಂಡಿಕ್ಕಿ ಹತ್ಯೆಗೈದಿದ್ದರು. ಶಾಸಕರಾದ ಕೆ ಕುಂಞÂ ರಾಮನ್ ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನ ಹರ್ಷೋತ್ಸವದ ಬಳಿಕ ಅವರ ಸ್ನೇಹಿತನ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ಬೆನ್ನಿಗೆ ಗುಂಡು ಹಾರಿಸಲಾಗಿತ್ತು. ರಾವ್ ಬಾಲ್ಯದಲ್ಲಿ ಸಿಪಿಎಂ ಶಾಖೆಯ ಸದಸ್ಯರಾಗಿದ್ದರು. ರವೀಂದ್ರ ರಾವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಅಡೂರ್ ಬೆಳ್ಳಚ್ಚೇರಿಯ ಶ್ರೀಧರನ್ (46) ಅವರನ್ನು ಪೆÇಲೀಸರು ಬಂಧಿಸಿದ್ದಾರೆ.