ನವದೆಹಲಿ: ಕ್ರಿಶ್ಚಿಯನ್ ಚರ್ಚುಗಳಲ್ಲಿ ತಪ್ಪೊಪ್ಪಿಗೆಯನ್ನು ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಧರ್ಮ ಬೋಧಕರು ತಪೆÇ್ಪಪ್ಪಿಗೆಯ ರಹಸ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅರ್ಜಿಯು ಮಲಂಕರ ಚರ್ಚುಗಳಲ್ಲಿ ತಪ್ಪೊಪ್ಪಿಗೆಯನ್ನು ನಿಷೇಧಿಸುವಂತೆ ಕೋರಿದೆ.
ತಪ್ಪೊಪ್ಪಿಗೆಯ ರಹಸ್ಯವನ್ನು ಮಹಿಳೆಯರ ಲೈಂಗಿಕ ದೌರ್ಜನ್ಯಕ್ಕೆ ಬಳಸಲಾಗುತ್ತಿದೆ ಮತ್ತು ತಪೆÇ್ಪಪ್ಪಿಗೆಯ ರಹಸ್ಯವನ್ನು ಹಣವನ್ನು ಸುಲಿಗೆ ಮಾಡಲು ಬಳಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ವರದಿಯ ಪ್ರಕಾರ ಇಬ್ಬರು ಮಲಂಕರ ಸಭಾ ಭಕ್ತರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ತಪ್ಪೊಪ್ಪಿಗೆ ಗೌಪ್ಯತೆಗೆ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಆದ್ದರಿಂದ ತಪ್ಪೊಪ್ಪಿಗೆಯನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ತಪ್ಪೊಪ್ಪಿಗೆಯ ಸೋಗಿನಲ್ಲಿ ಯುವತಿಯನ್ನು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೊಲ್ಲಂನ ಆರ್ಥೊಡಾಕ್ಸ್ ಪುರೋಹಿತರು ತನಿಖೆ ಎದುರಿಸುತ್ತಿದ್ದು ಈ ಮಧ್ಯೆ
ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮೊದಲ ಆರೋಪಿ ಫಾದರ್ ಅಬ್ರಹಾಂ ವರ್ಗೀಸ್ 16 ವರ್ಷದ ಬಾಲಕಿಯನ್ನು ಲೈಂಗಿಕ ಕಿರುಕುಳ ನೀಡಿದ್ದರೆಂದು ಒಂದು ಪ್ರಕರಣವಾದರೆ ಇನ್ನೊಬ್ಬ ಪಾದ್ರಿ ಕಿರುಕುಳವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಲಾಗಿದೆ.
ಕ್ಯಾಥೊಲಿಕ್ ಚರ್ಚ್ ಸಂಸ್ಕಾರವೆಂದು ಪರಿಗಣಿಸುವ ಸಾಂಪ್ರದಾಯಿಕ ತಪ್ಪೊಪ್ಪಿಗೆಯಲ್ಲಿ ಧರ್ಮ ವಿಶ್ವಾಸಿಗಳು ತಮ್ಮ 'ಪಾಪಗಳನ್ನು' ಯಾಜಕನಿಗೆ ಒಪ್ಪಿಸಿಕೊಳ್ಳುತ್ತಾರೆ. ತಪ್ಪೊಪ್ಪಿಗೆ ಕ್ರೈಸ್ತರ ವಿವಿಧ ಪಂಗಡಗಳಲ್ಲಿ ಅಸ್ತಿತ್ವದಲ್ಲಿದೆ. ಕ್ಯಾಥೊಲಿಕ್ ಚರ್ಚ್ ಮತ್ತು ಓರಿಯಂಟಲ್ ಆರ್ಥೊಡಾಕ್ಸ್ ಚರ್ಚನಲ್ಲಿ, ಭಕ್ತನಾದವ ತನ್ನ ಪಾಪಗಳನ್ನು ಒಬ್ಬ ಪುರೋಹಿತನಿಗೆ ರಹಸ್ಯವಾಗಿ ನಿವೇದಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಚರ್ಚ್ ಕಾನೂನಿನಂತೆ ಇವುಗಳನ್ನು ಆಲಿಸಿ ರಹಸ್ಯವಾಗಿಡಬೇಕು ಎಂಬ ನಿಯಮವಿದೆ.
ಬಲವಂತದ ತಪ್ಪೊಪ್ಪಿಗೆಯನ್ನು ಗೌಪ್ಯತೆ ಉಲ್ಲಂಘನೆ ಮತ್ತು ಇದನ್ನು ನಿಷೇಧಿಸಲೇ ಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ 2018 ರಲ್ಲಿ ತಿರಸ್ಕರಿಸಿತ್ತು. ತಪ್ಪೊಪ್ಪಿಗೆ ನೀಡಲು ಯಾರೂ ಒತ್ತಾಯಿಸುವುದಿಲ್ಲ ಮತ್ತು ತಪ್ಪೊಪ್ಪಿಕೊಳ್ಳುವುದು ವ್ಯಕ್ತಿಯ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.