ಸಿಯೋಲ್: ಖ್ಯಾತ ವಿದ್ಯುನ್ಮಾನ ಉಪಕರಣಗಳ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ ನ ಅಧ್ಯಕ್ಷ ಲೀ ಕುನ್-ಹೀ ನಿಧನರಾಗಿದ್ದು, ಅವರಿಗೆ 78 ವರ್ಷ ವಯಸ್ಸಾಗಿತ್ತು.
ಕೊರಿಯಾದ ಸಿಯೋಲ್ ನಲ್ಲಿ ಲೀ ನಿಧನರಾಗಿದ್ದು, ಅವರ ನಿಧನದ ಸಂಬಂಧ ಸ್ಯಾಮ್ಸಂಗ್ ಸಂಸ್ಥೆ ಕಂಬನಿ ಮಿಡಿದಿದೆ. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. 2014ರಲ್ಲಿ ಲೀ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
1987ರಲ್ಲಿ ಲೀ ತಮ್ಮ ತಂದೆಯ ಸಾವಿನ ಬಳಿಕ ಸ್ಯಾಮ್ಸಂಗ್ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. ವಿಶ್ವಕ್ಕೆ ಚಿಪಿ ಟಿವಿ ಪರಿಚಯಿಸಿದ ಖ್ಯಾತಿ ಈ ಸ್ಯಾಮ್ಸಂಗ್ ಸಂಸ್ಥೆಗೆ ಇದೆ. ಲೀ ಉಸ್ತುವಾರಿ ವಹಿಸಿಕೊಂಡ ಬಳಿಕ ಸ್ಯಾಮ್ಸಂಗ್ ಸಂಸ್ಥೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾಗಿ ತನ್ನ ನೆಲೆಕಂಡುಕೊಂಡಿತು. ಅಂತೆಯೇ ಸಾಕಷ್ಟು ವಿಚಾರವಾಗಿಯೂ ಲೀ ನ್ಯಾಯಾಲಯದ ವಿಚಾರಣೆ ಎದುರಿಸಿದ್ದರು. ವೈಟ್ ಕಾಲರ್ ಅಪರಾಧಕ್ಕಾಗಿ ಲೀ ಎರಡು ಬಾರಿ ಶಿಕ್ಷೆಗೊಳಪಟ್ಟು, ಕ್ಷಮೆ ಪಡೆದಿದ್ದರು.