ಕುಂಬಳೆ: ಕಾವ್ಯದೀಪ ಸಾಹಿತ್ಯ ಕಲಾ ವೇದಿಕೆಯ ವ್ಯಾಟ್ಸಪ್ ವಿಭಾಗದಲ್ಲಿ ಒಂದು ವಿನೂತ ಪ್ರಯೋಗವಾಗಿ ನಡೆದ ಆಡಿಯೋ ಕವಿಗೋಷ್ಠಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಇದರಲ್ಲಿ ಒಟ್ಟು ಅರುವತ್ತು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.
ಪ್ರಾರ್ಥನೆಯನ್ನು ಪ್ರಸನ್ನ ಸಿ.ಎಸ್. ಭಟ್ ಹಾಡಿದರು. ಯುವ ಕವಿ ಸಂಮ್ಯುಕ್ತ ಜೈನ್ ಸ್ವಾಗತ ಭಾಷಣ ನೆರವೇರಿಸಿದರೆ , ಗೋಷ್ಠಿಗೆ ಚಾಲನೆಯನ್ನು ನಿರ್ಮಲಾ ಶೇಷಪ್ಪ ಖಂಡಿಗೆ ತಮ್ಮ ಭಾಷಣದಲ್ಲಿ ನುಡಿದರು.
ಕವಿಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ಬಹುಮುಖ ಪ್ರತಿಭೆ ವತ್ಸಲಾ ಶ್ರೀಶ ಕೊಡಗು ಅಲಂಕರಿಸಿದ್ದರು. ಇಡೀ ಕಾರ್ಯಕ್ರಮವನ್ನು ಬಳಗದ ಯುವ ಪದಾಧಿಕಾರಿಗಳೂ ಕವಿಗಳೂ ಆದ ಡಾ.ಶ್ರೀಲತಾ ಪದ್ಯಾಣ ಮತ್ತು ವಿನಯ ಶಂಕರ ಚೆಕ್ಕೆಮನೆ ಇವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು.
ಧನ್ಯವಾದ ಸಮರ್ಪಣೆಯೊಂದಿಗೆ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ಬಳಗದ ಪ್ರಧಾನ ಕಾರ್ಯದರ್ಶಿ ಮಹೇಶ ಎಸ್.ವಿ ನೀಡಿ ಗೌರವಿಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಮೀಳಾ ಚುಳ್ಳಿಕ್ಕಾನ ಮತ್ತು ಕಾವ್ಯದೀಪ ಸಾಹಿತ್ಯ ಕಲಾವೇದಿಕೆಯ ಅಧ್ಯಕ್ಷ ಕೃಷ್ಣಪ್ರದೀಪ ಶೇಡಿಗುಮ್ಮೆ ಸಹಕರಿಸಿದರು.