ಕಾಸರಗೋಡು: "ನನ್ನ ಕ್ಷಯರೋಗ ಮುಕ್ತ ಕೇರಳ" ಯೋಜನೆಯನ್ನು ಯಶಸ್ವಿಯಾಗಿ ಜಾರೊಳಿಸಿದ ಹಿನ್ನೆಲೆಯಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಗೆ ರಾಜ್ಯ ಸರಕಾರದ ಅಕ್ಷಯ ಕೇರಳ ಪುರಸ್ಕಾರ ಲಭಿಸಿದೆ.
5 ವರ್ಷಕ್ಕಿಂತ ಕಳೆಗಿನ ವಯೋಮಾನದ ಮಕ್ಕಳಲ್ಲಿ ಸತತವಾಗಿ ಒಂದು ವರ್ಷ ಕಾಲ ಕ್ಷಯರೋಗ ಲಕ್ಷಣ ಪತ್ತೆಯಾಗದಿರುವ ಸಾಧನೆ, ಕ್ಷಯರೋಗ ಯಾರಲ್ಲೂ ಪತ್ತೆಯಾದವರಲ್ಲಿ ಯಾರೂ ಚಿಕಿತ್ಸೆ ಅರ್ಧದಲ್ಲಿ ಮೊಟಕುಗೊಳಿಸದೇ ಇರುವ ಹಿನ್ನೆಲೆಗಳಲ್ಲಿ ಈ ಪುರಸ್ಕಾರಕ್ಕೆ ಪಂಚಾಯತ್ ಭಾಜನವಾಗಿದೆ. ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಕಾರ್ಯಕರ್ತರು ನಡೆಸಿರುವ ಸಮರ್ಪಕ ಚಟುವಟಿಕೆ ಮತ್ತು ಜನಜಾಗೃತಿ ಕಾಯಕಗಳ ಹಿನ್ನೆಲೆಯಲ್ಲಿ ಈ ಮನ್ನಣೆ ಲಭಿಸಿದೆ. ಆರೋಗ್ಯ ಇಲಾಖೆ ಸಚಿವೆ ಕೆ.ಕೆ.ಶೈಲಜಾ ಟೀಚರ್, ಪ್ರದಾನ ಕಾರ್ಯದರ್ಶಿ ರಾಜನ್ ಕೆ.ಖೋಬ್ರಡೆ ಅವರು ಸಹಿತ ಮಾಡಿರುವ ಅರ್ಹತಾಪತ್ರ ಜಿಲ್ಲಾ ಕ್ಷಯರೋಗ ಸೆಂಟರ್ ಮುಖಾಂತರ ಗ್ರಾಮಪಂಚಾಯತ್ ಗೆ ಲಭಿಸಿದೆ.
ಗ್ರಾಮ ಪಂಚಾಯತ್ ವತಿಯಿಂದ ನಡೆದ ಸಭೆಯಲ್ಲಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅವರು ಕುಂಬಳೆ ಸಿಎಚ್.ಸಿ. ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಅವರಿಗೆ ಅರ್ಹತಾಪತ್ರ ಹಸ್ತಾಂತರಿಸಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಮುರಳೀಧರ ಯಾದವ್, ಸುರೇಶ್ ಭಂಡಾರಿ, ವೈದ್ಯಾಧಿಕಾರಿ ಡಾ.ಸುಬ್ಬಗಟ್ಟಿ, ಕುಂಬಳೆ ಬ್ಲೋಕ್ ಹೆಲ್ತ್ ಸುಪರ್ ವೈಸರ್ ಬಿ.ಅಶ್ರಫ್, ಪಿ.ಎಚ್.ಎಲ್. ಸುಪರ್ ವೈಸರ್ ಜೈನಮ್ಮ, ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ವಿವೇಕ್ ಮೊದಲಾದವರು ಉಪಸ್ಥಿತರಿದ್ದರು.