ಕುನ್ನಂಕುಳಂ: ತ್ರಿಶೂರ್‌ನಲ್ಲಿ ಸಿಪಿಎಂ ಶಾಖಾ ಕಾರ್ಯದರ್ಶಿಗೆ ಇರಿದು ಕೊಲೆ ಗ್ಯೆದ ಘಟನೆ ನಡೆದಿದೆ. ಚೌನ್ನೂರು ಪಂಚಾಯತ್‌ನ ಪುತುಸ್ಸೇರಿ ಶಾಖೆಯ ಕಾರ್ಯದರ್ಶಿ ಪಿ.ಯು.ಸನೂಪ್ (36) ಎಂಬಾತನನ್ನು ಇರಿದು ಕೊಲೆ ಮಾಡಲಾಗಿದೆ. ಈ ಹತ್ಯೆಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ. ಘಟನೆ ಭಾನುವಾರ ರಾತ್ರಿ 11 ಗಂಟೆಗೆ ಎರಮಪೆಟ್ಟಿ ಇಯಾಲ್ ಚಿಟ್ಟಿಲಂಗಡದಲ್ಲಿ ನಡೆದಿದೆ. ಗಾಯಗೊಂಡ ಮೂವರು ಸಿಪಿಎಂ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.
ಸನೂಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿತಿನ್, ವಿಬಿನ್ ಮತ್ತು ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಅವರನ್ನು ತ್ರಿಶೂರ್
ಕುನ್ನಮಕುಳಂನ ಖಾಸಗಿ ಆಸ್ಪತ್ರೆಗಳು ಮತ್ತು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ.
ಹತ್ಯೆಗ್ಯೆದವರು ಸಂಚರಿಸಿದ್ದ ಕಾರೆಂದು ಸಂಶಯಿಸಲಾದ ವಾಹನವೊಂದನ್ನು ತಾಲ್ಲೂಕು ಆಸ್ಪತ್ರೆ ಪರಿಸರದಲ್ಲಿ ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶವವನ್ನು ಇಂದು ಮರಣೋತ್ತರ ಪರೀಕ್ಷೆ ನಡೆಸಿ ವಿಚಾರಣಾ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಪೊಲೀಸರು ಸ್ಥಳದಲ್ಲೇ ಭದ್ರತೆಯನ್ನು ಹೆಚ್ಚಿಸಿದ್ದಾರೆ.