ತಿರುವನಂತಪುರ: ಇತಿಹಾಸದಲ್ಲೇ ಮೊದಲ ಬಾರಿಗೆ ಅಗ್ನಿಶಾಮಕ ದಳದಲ್ಲಿ ಮಹಿಳೆಯರನ್ನು ಗೃಹರಕ್ಷಕರಾಗಿ ನೇಮಕ ಮಾಡಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಮಹತ್ವದ ನಿರ್ಧಾರದ ಜೊತೆಗೆ, ಮಹಿಳೆಯರಿಗೆ ಶೇ.30 ಮೀಸಲಾತಿ ಖಾತರಿ ನೀಡಲಾಗಿದೆ ಎಂದು ಫೇಸ್ ಬುಕ್ ಪೆÇೀಸ್ಟ್ ನಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅಗ್ನಿಶಾಮಕ ಇಲಾಖೆ ಮತ್ತು ಪೆÇಲೀಸರಿಂದ ನಿಯೋಜಿಸಲ್ಪಟ್ಟ ಹೋಮ್ ಗಾರ್ಡ್‍ಗಳನ್ನು ವಿಪತ್ತು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರನ್ನು ಗೃಹರಕ್ಷಕರಾಗಿ ನೇಮಿಸುವುದು ಮತ್ತು ಮೀಸಲಾತಿಯನ್ನು ಪರಿಚಯಿಸುವುದು ಈ ನಿರ್ಧಾರದ ಹಿಂದಿದೆ ಎಂದು ಪಿಣರಾಯಿ ವಿಜಯನ್ ಫೇಸ್ ಬುಕ್‍ನಲ್ಲಿ ಬರೆದಿದ್ದಾರೆ.