ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಎಫ್‍ಐಆರ್‍ನಲ್ಲಿ ತಕ್ಷಣದ ಸಾಕ್ಷ್ಯಗಳನ್ನು ನೀಡದಿದ್ದರೆ ಅವರಿಗೆ ಜಾಮೀನು ನೀಡಬೇಕಾಗುತ್ತದೆ ಎಂದು ಎನ್‍ಐಎ ನ್ಯಾಯಾಲಯ ಹೇಳಿದೆ. ಪ್ರಕರಣದ ಕೆಲವು ಆರೋಪಿಗಳ ಜಾಮೀನು ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದ್ದು ಸೋಮವಾರ ಈ ಬಗ್ಗೆ ಎನ್‍ಐಎಗೆ ತಿಳಿಸಲಾಗಿದೆ.
ನ್ಯಾಯಾಲಯವು ಈ ಹಿಂದೆ ಸಾಕ್ಷ್ಯಗಳನ್ನು ಉಲ್ಲೇಖಿಸಿತ್ತು. ಬಂಧನದ ಬಳಿಕ ಜಾಮೀನು ಪರಿಗಣಿಸುವಾಗ ನ್ಯಾಯಾಲಯ ಮತ್ತೆ ಈ ಉಲ್ಲೇಖವನ್ನು ನೀಡಿದೆ. ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವ ಅಪರಾಧಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕೂಡಲೇ ಹಾಜರುಪಡಿಸಬೇಕು. ಅದನ್ನು ಸಲ್ಲಿಸದಿದ್ದರೆ, ಆರೋಪಿಗಳನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ತನಿಖಾ ಸಂಸ್ಥೆಗಳು ಯುಎಪಿಎಯ ನಿಬಂಧನೆಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿವೆ ಎಂದು ಪ್ರತಿವಾದಿ ವಾದಿಸಿದರು. ತೆರಿಗೆ ವಂಚನೆಯಂತಹ ಪ್ರಕರಣಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಬಹುದು ಎಂದು ಪ್ರತಿವಾದಿಯ ವಕೀಲರು ಗಮನಸೆಳೆದರು. ಇದರ ಬೆನ್ನಲ್ಲೇ ನ್ಯಾಯಾಲಯವು ಎನ್‍ಐಎಗೆ ಎಫ್‍ಐಆರ್‍ನಲ್ಲಿ ಆರೋಪಗಳ ಪುರಾವೆಗಳನ್ನು ಸಲ್ಲಿಸುವಂತೆ ಕೇಳಿದೆ. ಆರೋಪಿಗಳ ಜಾಮೀನು ಅರ್ಜಿಯನ್ನು ಇಂದು ಪರಿಗಣಿಸಲಾಗುವುದು.
ಕೇಸ್ ಡೈರಿಯನ್ನು ತಯಾರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಚಿನ್ನದ ಕಳ್ಳಸಾಗಣೆ ಮತ್ತು ಅವರ ಸಂಪರ್ಕಗಳ ಮೇಲೆ ಲಾಭ ಗಳಿಸಿದವರ ಪಟ್ಟಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.