ಕಾಸರಗೋಡು: ಹುರಿಹಗ್ಗ ಉದ್ದಿಮೆ ವಯವನ್ನು ಮರಳಿ ಹಿಂದಿನ ವೈಭವದತ್ತ ಒಯ್ಯುವ ಯತ್ನ ಫಲಕಾಣುತ್ತಿದೆ ಎಂದು ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಅಭಿಪ್ರಾಯಪಟ್ಟರು.
ಕಣ್ಣೂರು ಕಯರ್ ಪ್ರಾಜೆಕ್ಟ್ ವ್ಯಾಪ್ತಿಯ ಪಡನ್ನ ಕಡಪ್ಪುರಂ ಹುರಿಹಗ್ಗ ಉದ್ದಿಮೆ ಸಹಕಾರಿ ಸಂಘಕ್ಕೆ ರಾಜ್ಯ ಸರಕಾರ ವತಿಯಿಂದ ಕೊಡಮಾಡಿರುವ 10 ಆಟೋಮೆಟಿಕ್ ಸ್ಪಿನ್ನಿಂಗ್ ಮಿಷಿನ್ ಗಳ ಚಟುವಟಿಕೆ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಈ ಬಾರಿಯ ರಾಜ್ಯ ಸರಕಾರ 2016ರಲ್ಲಿ ಅಧಿಕಾರಕ್ಕೇರಿದ ವೇಳೆ 7 ಸಾವಿರ ಟನ್ ಇದ್ದ ತೆಂಗಿನ ನಾರು ಉತಪ್ನ್ನಗಳು ಈಗ 20 ಸಾವಿರ ಟನ್ ಆಗಿ ಹೆಚ್ಚಳಗೊಂಡಿದೆ. ಕೋವಿಡ್ ಮುಗ್ಗಟ್ಟುಗಳನ್ನು ಎದುರಿಸಿ ನೂತನ ತಂತ್ರಜ್ಞಾನಗಳ ಬಳಕೆಯೊಂದಿಗೆ ಈ ಉದ್ದಮೆ ವಲಯ ಪುನಶ್ಚೇತನಗೊಳ್ಳಲಿದೆ ಎಂದವರು ತಿಳಿಸಿದರು.
ಕೋವಿಡ್ ಸಂಹಿತೆಗಳನ್ನು ಪಾಲಿಸುವ ಮೂಲಕ ನಡೆದ ಸಮಾರಂಭದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಪಡನ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಸಿ.ಫೌಝಿಯಾ ಯಂತ್ರಗಳ ಸ್ವಿಚ್ ಆನ್ ನಡೆಸಿದರು. ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪದ್ಮಕುಮಾರ್ ಪ್ರದಾನ ಭಾಷಣ ಮಾಡಿದರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.