HEALTH TIPS

ಕಾವ್ಯ ಮತ್ತು ಕಾರ್ತಿಕಾ ಅವರನ್ನು ಮರೆಯದ ರಾಹುಲ್ ಗಾಂಧಿ-ಅನಾಥರಿಗೆ ಮನೆ ಕೀಲಿಕೈ ಹಸ್ತಾಂತರ-ಇಂದು ವಯನಾಡಿನಲ್ಲಿ ಅಭಿವೃದ್ಧಿ ಯೋಜನೆಗಳು, ಕೋವಿಡ್ ಮತ್ತು ರಕ್ಷಣಾ ತಂತ್ರಗಳ ಚರ್ಚೆ

  

          ಕೋಝಿಕ್ಕೋಡ್: ವಯನಾಡ್ ಸಂಸದ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕೇರಳ ಭೇಟಿ ಕಾವ್ಯ ಮತ್ತು ಕಾರ್ತಿಕಾಗೆ ಸಂತೋಷವನ್ನು ತರುತ್ತದೆ. ಕಾವಲಪ್ಪರ ಭೂಕುಸಿತದಲ್ಲಿ ತಾಯಿ, ಅಜ್ಜ ಮತ್ತು ಮೂವರು ಸಹೋದರಿಯರನ್ನು ಕಳೆದುಕೊಂಡಿರುವ ಸಹೋದರಿಯರಿಗೆ ಕಾಂಗ್ರೆಸ್ ನಿರ್ಮಿಸಿದ ಮನೆಯ ಕೀಲಿಗಳನ್ನು ರಾಹುಲ್ ಹಸ್ತಾಂತರಿಸಿದರು. ಮಲಪ್ಪುರಂ ಕಲೆಕ್ಟರೇಟ್‍ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮನೆಯ ಕೀಲಿಗಳನ್ನು ಹಸ್ತಾಂತರಿಸಲಾಯಿತು.

     ಕವಳಪ್ಪಾರ ದುರಂತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ  ರಾಹುಲ್ ಗಾಂಧಿ ಅವರು ಕಾವ್ಯ ಮತ್ತು ಕಾರ್ತಿಕಾ ಅವರ ಸಂಕಷ್ಟದ ಬಗ್ಗೆ ಮಾಹಿತಿ ಪಡೆದರು. ಇಬ್ಬರು ಅನಾಥರನ್ನು ಖುದ್ದಾಗಿ ಭೇಟಿ ಮಾಡಿದ ರಾಹುಲ್, ಏಳು ತಿಂಗಳ ನಂತರ ಅವರಿಗೆ ನಿರ್ಮಿಸಿದ ಮನೆಯನ್ನು ಕಾಂಗ್ರೆಸ್ ಜಿಲ್ಲಾ ನಾಯಕತ್ವಕ್ಕೆ ಹಸ್ತಾಂತರಿಸಿದ ನಂತರ ಇತರ ಕಾರ್ಯಕ್ರಮಕ್ಕೆ ಮರಳಿದರು. 

         ವಿಕೋಪದ ಸಂದರ್ಭ ಕಾವ್ಯಾ ಮತ್ತು ಕಾರ್ತಿಕಾ ಕಾಲೇಜು ಹಾಸ್ಟೆಲ್‍ನಲ್ಲಿದ್ದರು. ಈಸ್ಟ್ ಎರ್ನಾಡ್ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ನೆರವಿನಿಂದ ಜಮೀನಿನಲ್ಲಿ 7 ಲಕ್ಷ ರೂ. ವ್ಯಯಿಸಿ ಮನೆ ನಿರ್ಮಿಸಲಾಗಿದೆ.  ಕಾರ್ತಿಕ ಮತ್ತು ಕಾವ್ಯ ಮಲಪ್ಪುರಂ ಎಡಕ್ಕಾರ ಮೂಲದವರು.

         ಕೋವಿಡ್ ವ್ಯಾಪಕತೆಯ ಸುಧೀರ್ಘ ಕಾಲಾವಧಿಯ ಬಳಿಕ ಭಾನುವಾರ ಮೊದಲ ಬಾರಿ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದರು. ಮೂರು ದಿನಗಳ ಭೇಟಿಗಾಗಿ ಸೋಮವಾರ ಬೆಳಿಗ್ಗೆ 11.50 ಕ್ಕೆ ವಿಶೇಷ ವಿಮಾನದಲ್ಲಿ ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಸ್ವಾಗತಿಸಿದರು. ಬಳಿಕ ಮಲಪ್ಪುರಂ ಕಲೆಕ್ಟರೇಟ್‍ನಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಂತ್ರಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಳಿದಾಗ, ರಾಹುಲ್ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಂಡರು.

      ರಾಹುಲ್ ಗಾಂಧಿ ಇಂದು(ಮಂಗಳವಾರ) ಬೆಳಿಗ್ಗೆ 10.30 ಕ್ಕೆ ವಯನಾಡ್ ಕಲೆಕ್ಟರೇಟ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ಮತ್ತು 11.30 ಕ್ಕೆ ದಿಶಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.

       ವಯನಾಡಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಅಭಿವೃದ್ಧಿ ಯೋಜನೆಗಳು ಮತ್ತು ಕೋವಿಡ್ ರಕ್ಷಣಾ ಚಟುವಟಿಕೆಗಳ ಚರ್ಚೆಗಳಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಪರಿಗಣನೆ ನೀಡಲಾಗುವುದು. ಈ ಮಧ್ಯೆ ಅವರು ಭಾರತ್ ಮಾತಾ ಯೋಜನೆಯ ಜೋಡಣೆ ಕುರಿತು ಜಿಲ್ಲಾಧಿಕಾರಿಗಳೊಂದಿ  ಚರ್ಚಿಸಲಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಮಾನಂದವಾಡಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ 3.20 ಕ್ಕೆ ದೆಹಲಿಗೆ ಮರಳಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries