ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಏಳು ಜಿಲ್ಲೆಗಳ ಮೊದಲ ಹಂತದಲ್ಲಿ ಉಳಿದ ಏಳು ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿವೆ. ಪ್ರಸ್ತುತ ಆಡಳಿತ ಮಂಡಳಿಯ ಅವಧಿ ನವೆಂಬರ್ 11 ಕ್ಕೆ ಕೊನೆಗೊಳ್ಳುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು.
ಸ್ಥಳೀಯಾಡಳಿತ ಚುನಾವಣೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ರಾಜ್ಯದಲ್ಲಿ ಪ್ರಗತಿಯಲ್ಲಿವೆ. ಮೀಸಲಾತಿ ವಾರ್ಡ್‍ಗಳ ಪಟ್ಟಿ ಪೂರ್ಣಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅಂತಿಮ ಹಂತಗಳಲ್ಲಿದೆ. ಇದರಲ್ಲಿ ಸ್ಥಾನಗಳ ನಿರ್ಣಯವೂ ಸೇರಿದೆ. ಕೋವಿಡ್ ನಿಯಂತ್ರಣ ವಿಧೇಯಕಗಳಿಗೆ ಅನುಗುಣವಾಗಿ ಚುನಾವಣೆ ನಡೆಸಲಾಗುವುದು. ಹೊಸ ಆಡಳಿತ ಮಂಡಳಿಯನ್ನು ಡಿಸೆಂಬರ್ ಮಧ್ಯದಲ್ಲಿ ಆಯ್ಕೆಯಾಗಿ ಅಧಿಕಾರವಹಿಸಲಿವೆ. ಚುನಾವಣಾ ಪ್ರಕ್ರಿಯೆಗಳನ್ನು ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಸುರಕ್ಷಿತವಾಗಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ರಾಜ್ಯ ಚುನಾವಣಾ ಆಯೋಗ ಇನ್ನಷ್ಟು ಸಿದ್ದತೆಗಳನ್ನು ತಯಾರಿಗೊಳಿಸಲಿದೆ ಎಂದು ಆಯೋಗ ತಿಳಿಸಿದೆ.
1,200 ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಬೂತ್‍ಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು. ಮತದಾನದ ದಿನ ಕೋವಿಡ್ ಬಾಧಿತರಾಗಿರುವರಿಗೆ ಮತದಾನಗೈಯ್ಯಲು ಅಂಚೆ ಮತದಾನ ವ್ಯವಸ್ಥೆ ಜಾರಿಗೆ ತರಲಾಗುವುದೆಂದು ಆಯೋಗ ಈ ಹಿಂದೆಯೇ ತಿಳಿಸಿತ್ತು.