ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಬಾರ್ ಗಳನ್ನು ಶೀಘ್ರ ಪುನರಾರಂಭಿಸಲು ಸಾಧ್ಯ ಇಲ್ಲ ಎಂದು ಸರ್ಕಾರ ನಿರ್ಧಾರ ವ್ಯಕ್ತಪಡಿಸಿದೆ. ಕೋವಿಡ್ ಮತ್ತೆ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಾರ್‍ಗಳನ್ನು ತೆರೆಯುವುದು ಹಿತವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು. ರಾಜ್ಯದಲ್ಲಿ ಕೋವಿಡ್ ಅಡೆತಡೆಯಿಲ್ಲದೆ ಮುಂದುವರಿಯುತ್ತಿರುವುದರಿಂದ ಬಾರ್‍ಗಳನ್ನು ತೆರೆಯದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಬುಧವಾರ ಮೊದಲ ಬಾರಿಗೆ ರಾಜ್ಯದಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಕೋವಿಡ್ ಸೋಂಕಿತರು ವರದಿಯಾದ್ದರಿಂದ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
ಆಲ್ಕೊಹಾಲ್ ಸೇವನೆಯ ಮೇಲಿನ ನಿಬಂಧನೆಗಳೊಂದಿಗೆ ಬಾರ್‍ಗಳನ್ನು ತೆರೆಯಬೇಕೆ ಎಂದು ಉನ್ನತ ಮಟ್ಟದ ಸಭೆ ಪರಿಶೀಲಿಸಿತು. ಬಾರ್ ತೆರೆಯಲು ಅನುಮತಿ ಕೋರಿ ಬಾರ್ ಮಾಲೀಕರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಕ್ಲಬ್‍ಗಳಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ಇದೆಯೇ ಎಂದು ಪರಿಶೀಲಿಸಲಾಯಿತು. ಬಾರ್‍ಗಳು ತೆರೆದ ಬಳಿಕ ಕೌಂಟರ್ ಮಾರಾಟವನ್ನು ಕೊನೆಗೊಳಿಸಲು ತೀರ್ಮಾನಿಸಲಾಯಿತು.
ಪ್ರಸ್ತುತ ಸಂಜೆ 5 ರ ವರೆಗೆ ಕೌಂಟರ್ ಗಳ ಮೂಲಕ ಬಾರ್‍ಗಳಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಬಾರ್ ಗಳಿಗೆ ತೆರಳಿ ಕುಳಿತು ಮದ್ಯ ಸೇವಿಸುವುದನ್ನು ನಿಷೇಧಿಸಿದ್ದು, ಆದರೆ ಕೌಂಟರ್ ಗಳ ಮೂಲಕ ಮಾರಾಟ ಮುಂದುವರಿಯಲಿದೆ. ಇದರಿಂದ ಬೆವ್ಕೊದ ಆರ್ಥಿಕ ನಷ್ಟ ಒಂದಷ್ಟು ಸಮತೋಲನಗೊಳ್ಳುವುದೆಂದು ಸರ್ಕಾರ ಅಂದಾಜಿಸಿದೆ.