ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಯುಎಇ ಗಡೀಪಾರು ಮಾಡಲಾಗಿದ್ದ ರಾಬಿನ್ಸ್ ಹಮೀದ್ ನನ್ನು ಕೊಚ್ಚಿಗೆ ಕರೆತರಲಾಗಿದೆ. ಪ್ರಕರಣದಲ್ಲಿ ಬಂಧಿತನಾಗಿದ್ದ ರಾಬಿನ್ಸ್‍ನನ್ನು ಯುಎಇಗೆ ಗಡೀಪಾರು ಮಾಡಲಾಗಿತ್ತು. ಬಳಿಕ ಸೋಮವಾರ ಆತನನ್ನು ಎನ್.ಐ.ಎ ವಶಕ್ಕೆ ತೆಗೆದುಕೊಂಡಿತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಬಿನ್ಸ್ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಆತ ಮುವಾಟ್ಟುಪುಳ ಮೂಲದವನು. ಯುಎಇಯಲ್ಲಿ ಚಿನ್ನ ಕಳ್ಳಸಾಗಣೆಗೆ ಕಾರಣವಾದವನು ಇವನು ಎಂದು ತನಿಖಾ ತಂಡ ಪತ್ತೆಹಚ್ಚಿದೆ.
ರಾಜತಾಂತ್ರಿಕ ಸರಂಜಾಮುಗಳ ಮೂಲಕ ಚಿನ್ನ ಕಳ್ಳಸಾಗಣೆ ಕುರಿತ ತನಿಖೆಯು ರಾಬಿನ್ಸ್ ಬಗ್ಗೆ ಸುದೀರ್ಘ ತನಿಖೆಗೆ ಕಾರಣವಾಯಿತು. ಹಸ್ತಾಂತರ ಒಪ್ಪಂದದಡಿಯಲ್ಲಿ ರಾಬಿನ್ಸ್‍ನನ್ನು ಭಾರತಕ್ಕೆ ಬಿಟ್ಟುಕೊಡಲಾಗಿದೆ.
ನಿನ್ನೆ ಸಂಜೆ 4.25 ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ರಾಬಿನ್ಸ್ ನೆಡುಂಬಾಶ್ಚೇರಿಗೆ ಕರೆತರಲಾಯಿತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಯುಎಇಯಲ್ಲಿ ಫೈಸಲ್ ಫರೀದ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.