ಮಂಜೇಶ್ವರ : ಗಡಿನಾಡಿನ ಪ್ರಸಿದ್ದ ಯಕ್ಷಗಾನ ಕಲಾ ಸಂಘಟನೆ ಯಕ್ಷಬಳಗ ಹೊಸಂಗಡಿ ಸಂಘಟನೆಯು ತನ್ನ ಮೂವತ್ತನೆ ವರ್ಷದ ಕಲಾಚಟುವಟಿಕೆಗೆ ಸಿದ್ಧಗೊಳ್ಳುತ್ತಿದ್ದು ಕಾರ್ಯಕ್ರಮ 2021ರ ಆಷಾಢ ಮಾಸದಲ್ಲಿ ಜರಗಲಿದೆ. ತ್ರಿಂಶತಿಯ ಪೂರ್ವಭಾವಿಯಾಗಿ ಯಕ್ಷಬಳಗದ ಚಟುವಟಿಕೆಯಲ್ಲಿ ಸುದೀರ್ಘಕಾಲದಿಂದ ಭಾಗವಹಿಸುತ್ತಿದ್ದ ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಹಾಗೂ ಮಾಜಿ ಕರ್ನಾಟಕ ಯಕ್ಷಗಾನ ಜಾನಪದ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ದಂಪತಿಗಳನ್ನು ಶ್ರೀಯುತರ ನಿವಾಸದಲ್ಲಿ ಭೇಟಿಯಾಗಿ ಫಲಪುಷ್ಪಾದಿಗಳೊಂದಿಗೆ ಗೌರವಿಸಲಾಯಿತು. ಈ ಸಂದರ್ಭ ಕುಂಬಳೆ ಸುಂದರ ರಾವ್ ಅವರ ಸಂದೇಶ ಪಡೆಯಲಾಯಿತು.
ಯಕ್ಷಬಳಗ ಸಂಚಾಲಕ ಸತೀಶ ಅಡಪ ಸಂಕಬೈಲು, ಕಾರ್ಯದರ್ಶಿ ನಾಗಾರಾಜ ಪದಕಣ್ಣಾಯ ಮೂಡಂಬೈಲು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಯಕ್ಷಬಳಗ ಸದಸ್ಯ ದೀಪಕ್ ರಾಜ್ ಐಲ್ ಉಪಸ್ಥಿತರಿದ್ದರು.