ತಿರುವನಂತಪುರ: ರಾಹುಲ್ ಗಾಂಧಿ ಸ್ಥಳೀಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಅಂತಹ ವಿಷಯಗಳನ್ನು ಹೇಳಲು ಇಲ್ಲಿ ಬೇರೊಬ್ಬರು ಇದ್ದಾರೆ ಎಂದು ಅವರು ಹೇಳಿದರು. ಕೋವಿಡ್ ರಕ್ಷಣೆಗೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ರಾಹುಲ್ ಅಭಿನಂದನೆ ಸಲ್ಲಿಸಿದ್ದರ ಬಗ್ಗೆ ಕೇಳಿದಾಗ, ಚೆನ್ನಿತ್ತಲ ಪ್ರತಿಕ್ರಿಯಿಸಿ ಅಸಮಧಾನನ ವ್ಯಕ್ತಪಡಿಸಿದರು.
"ಕೋವಿಡ್ ವಿಷಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ದೂಷಿಸುತ್ತಿವೆ" ಎಂದು ಚೆನ್ನಿತ್ತಲ ಹೇಳಿದರು. ರಾಹುಲ್ ಗಾಂಧಿಯಂತಹವರು ಇಲ್ಲಿಗೆ ಬಂದು ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಅವರು ಮಾತನಾಡುವಾಗ ಅವರಿರುವ ಸ್ಥಾನಕ್ಕನುಗುಣವಾಗಿ ಮಾತನಾಡಿದರೆ ಸಾಕು. ನಾವೆಲ್ಲರೂ ಇಲ್ಲಿ ಹೇಳಬೇಕಾದ ವಿಷಯಗಳಿವೆ. ಅದು ನಮ್ಮ ಅಭಿಪ್ರಾಯ. ಎಂದು ಚೆನ್ನಿತ್ತಲ ಸ್ಪಷ್ಟಪಡಿಸಿದರು.
ಕೋವಿಡ್ ರಕ್ಷಣೆಯಲ್ಲಿ ಕೇರಳ ಉತ್ತಮ ಆದರ್ಶಪ್ರಾಯವಾಗಿದೆ ಎಂದು ರಾಹುಲ್ ಗಾಂದಿ ಬುಧವಾರ ಕಲ್ಪೆಟ್ಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಕೋವಿಡ್ ವಿರುದ್ಧದ ರಕ್ಷಣೆಯಲ್ಲಿ ಕೇರಳ ವಿಫಲವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದು ದುರದೃಷ್ಟಕರ ಎಂದು ರಾಹುಲ್ ತಿಳಿಸಿದ್ದರು.
'ಅತ್ಯುತ್ತಮ ವಿಕೇಂದ್ರೀಕೃತ ವ್ಯವಸ್ಥೆಗಳು ಕೇರಳದಲ್ಲಿ ಕೋವಿಡ್ ನಿಯಂತ್ರಣದಲ್ಲಿ ವಿಭಿನ್ನಗೊಳಿಸುತ್ತವೆ. ಕೋವಿಡ್ ಗೆ ಎದುರಾಗಿ ಜನರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವುದರಲ್ಲಿ ಕೇರಳ ವಿಶಿಷ್ಟವಾಗಿದೆ. ಇದು ಚೆನ್ನಾಗಿ ನಡೆಯುತ್ತಿದೆ ಎಂದು ರಾಹುಲ್ ಗಾಂದಿ ರಾಜ್ಯದ ಪ್ರತಿಪಕ್ಷದ ಸ್ಥಾನದ ನೇತಾರನಾಗಿ ಇರಿಸುಮುರಿಸಿಗೆ ಕಾರಣರಾಗಿದ್ದಾರೆ.