ಉಪ್ಪಳ: ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ವತಿಯಿಂದ ಸ್ಥಳೀಯಾಡಳಿತ ಚುನಾವಣಾ ಸಿದ್ಧತಾ ಕಾರ್ಯಾಗಾರವು ಜೋಡುಕಲ್ಲು ತಪೆÇೀವನದಲ್ಲಿ ಇತ್ತೀಚೆಗೆ ಜರಗಿತು.
ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡ ಅಧ್ಯಕ್ಷತೆ ವಹಿಸಿದ ಕಾರ್ಯಾಗಾರವನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಎಡ ರಂಗದ ದುರಾಡಳಿತಕ್ಕೆ ಐಕ್ಯರಂಗ ಬೆಂಬಲ ನೀಡುತ್ತಿದೆ.ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರ ತಮ್ಮದೆಂದು ಬಿಂಬಿಸುತ್ತಿರುವುದಾಗಿ ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಸಮಿತಿ ಕೌನ್ಸಿಲ್ ಸದಸ್ಯೆ ಸರೋಜಾ ಆರ್ ಬಲ್ಲಾಳ್, ಪರಿಶ್ಟಿ ಜಾತಿ ಮೊರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಜಿ. ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ, ಮಂಡಲಾಧ್ಯಕ್ಷ ಮಣಿಕಂಠ ರೈ, ನಾಯಕರಾದಪ್ರಸಾದ್ ರೈ ಕಯ್ಯಾರು, ಪ್ರವೀಣಚಂದ್ರ ಬಲ್ಲಾಳ್, ಪುಷ್ಪಾ ಲಕ್ಷ್ಮಿ, ಜಯಲಕ್ಷ್ಮಿ ಭಟ್, ಹರೀಶ್ ಬೊಟ್ಟಾರಿ, ಸತೀಶ್ ಶೆಟ್ಟಿ ಕುಡಾಲು,ಸತ್ಯಶಂಕರ ಭಟ್ ಚಿಪ್ಪಾರು, ಕಿಶೋರ್ ಪೆರ್ವೊಡಿ, ಗಣೇಶ ಕುಲಾಲ್, ತಾರಾ ವಿ ಶೆಟ್ಟಿ,ರಾಜೀವಿ ರೈ,ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಸುಧಾಮ ಗೋಸಾಡ ಮತ್ತು ಎಂ.ವಿಜಯಕುಮಾರ್ ರೈ ತರಗತಿ ನಡೆಸಿದರು.ಪೈವಳಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್ ಧ್ವಜಾರೋಹಣಗೈದರು. ಪ್ರಶಾಂತ್ ಕೆ.ಪಿ ನಿರ್ವಹಿಸಿ ವಂದಿಸಿದರು.