ಕಾಸರಗೋಡು: ಸ್ಥಳೀಯ ಅಭಿವೃದ್ಧಿ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ನವಕೇರಳ ಮಿಷನ್ ಚಟುವಟಿಕೆಗಳ ಕನ್ನಡ ಮತ್ತು ಮಲೆಯಾಳಂ ಕಿರು ಹೊತ್ತಗೆಯ ಬಿಡುಗಡೆ ಜರಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಚಾಲನೆ ನೀಡಿದರು. ಈ ಬಾರಿಯ ರಾಜ್ಯ ಸರಕಾರ ಅ„ಕಾರಕ್ಕೇರಿದ ಮೇಲೆ ಕಾಸರಗೋಡು ಜಿಲ್ಲೆಯ ವಿವಿಧ ವಲಯಗಳಿಗೆ ಒದಗಿಸಿದ 'ಕಾಸರಗೋಡಿಗಾಗಿ ಕಾಯ್ದಿರಿಸುವಿಕೆ' ಎಂಬ ಹ್ಯಾಷ್ ಟ್ಯಾಗ್‍ನಲ್ಲಿ ಕಿರು ವೀಡಿಯೋಗಳು, ಕಿರು ಹೊತ್ತಗೆಗಳು, ಸಾಕ್ಷ್ಯಚಿತ್ರಗಳು, ಡಿಜಿಟಲ್ ಭಿತ್ತಿಪತ್ರಗಳು ಈ ಮೂಲಕ ಸಾರ್ವಜನಿಕರಿಗೆ ತಲಪಲಿವೆ. ವಿವಿಧ ಮಿಷನ್‍ಗಳ ಮೂಲಕ ಪಂಚಾಯತ್ ವ್ಯವಸ್ಥೆಗಳ ಮೂಲಕ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಚಟುವಟಿಕೆಗಳ, ಅಭಿವೃದ್ಧಿ ಯೋಜನೆಗಳನ್ನು ಜನತೆಗೆ ತಲಪಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಇಲಾಖೆಯ ನೇತೃತ್ವದಲ್ಲಿ ಆರಂಭಿಸಲಾದ ಸ್ಥಳೀಯ ಅಭಿವೃದ್ಧಿ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ನವಕೇರಳ ಮಿಷನ್ ಚಟುವಟಿಕೆಗಳ ಕನ್ನಡ ಮತ್ತು ಮಲೆಯಾಳಂ ಕಿರು ಹೊತ್ತಗೆಗಳ ಬಿಡುಗಡೆ ಈ ವೇಳೆ ನಡೆದಿದೆ. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪ ಜಿಲ್ಲಾ„ಕಾರಿ ಮೇಘಶ್ರೀ, ಹೆಚ್ಚುವರಿ ದಂಡನಾ„ಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾ„ಕಾರಿ ಮಧುಸೂದನನ್ ಎಂ. ಉಪಸ್ಥಿತರಿದ್ದರು.
ವಿವಿಧ ಮಿಷನ್‍ಗಳ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿಗಳನ್ನು ಸಮಗ್ರವಾಗಿ ಅಳವಡಿಸಿ ದಾಖಲಾತಿಗಳನ್ನು ಸಿದ್ಧಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇವನ್ನು ಜಿಲ್ಲೆಯ ವಿವಿಧೆಡೆ ವಿತರಣೆಗೊಳಿಸಲಾಗುವುದು.