ಕುಂಬಳೆ: ಚಿನ್ನ ಕಳ್ಳ ಸಾಗಾಣಿಕೆ, ಲೈಫ್ ಮಿಷನ್ ಭ್ರಷ್ಟಾಚಾರದ್ದಲ್ಲಿ ಭಾಗಿಯಾದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆ ಆಗ್ರಹಿಸಿ ಕೋವಿಡ್ 19 ಶಿಷ್ಟಾಚಾರ ಪಾಲಿಸಿ ಕುಂಬಳೆಯಲ್ಲಿ ಸೋಮವಾರ ಯು.ಡಿ.ಎಫ್ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಯು. ಡಿ. ಎಫ್ ಸಂಚಾಲಕ ಮಂಜುನಾಥ್ ಆಳ್ವ ಮಡ್ವ ಉದ್ಘಾಟಿಸಿದರು. ಕುಂಬ್ಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬ್ಳೆ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು. ಲೀಗ್ ನಾಯಕರಾದ ಎ.ಕೆ. ಅರಿಫ್, ಮೊಹಮ್ಮದ್ ಅಲಿ, ಕಾಂಗ್ರೆಸ್ ನಾಯಕರಾದ ಲೋಕನಾಥ್ ಶೆಟ್ಟಿ, ರಮೇಶ್ ಗಾಂಧಿನಗರ ಮೊದಲಾದವರು ಭಾಗವಹಿಸಿದರು.