ನವದೆಹಲಿ: ದೇಶೀಯ ಮಾರುಕಟ್ಟೆಗಳಲ್ಲಿಬೆಲೆ ಏರಿಕೆಯಾಗಿರುವ ನಡುವೆ ತಕ್ಷಣ ಜಾರಿಗೆ ಬರುವಂತೆ ಈರುಳ್ಳಿ ಬಿತ್ತನೆ ಬೀಜಗಳ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಈ ಮೊದಲು, ಈರುಳ್ಳಿ ಬಿತ್ತನೆ ಬೀಜಗಳ ರಫ್ತು ನಿಬರ್ಂಧಿತ ವಿಭಾಗದಲ್ಲಿತ್ತು, ಅಂದರೆ ರಫ್ತು ಮಾಡುವವರಿಗೆ ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಅಗತ್ಯವಿತ್ತು.
"ಈರುಳ್ಳಿ ಬಿತ್ತನೆ ಬೀಜಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದ್ದು ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ" ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ಇದಾಗಲೇ ರಫ್ತಿಗೆ ಸಿದ್ದವಾಗಿರುವ ಸರಕುಗಳಿಗೆ ಇದು ಅನ್ವಯಿಸುವುದಿಲ್ಲ.