ಕಾಸರಗೋಡು: ಪಾಳುವಸ್ತುಗಳನ್ನು ಮೂಲದಿಂದಲೇ ವಿಂಗಡಿಸಿ ಹರಿತಕ್ರಿಯಾಸೇನೆಗೆ ಹಸ್ತಾಂತರಿಸುವ ಆಶಯದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂದೆಶಗಳನ್ನು ಹೊಂದಿರುವ ಬೃಹತ್ ಹಾರ್ಡಿಂಗ್ ಗಳಿಗೆ ಡಿಸೈನ್ ನೀಡುವ ಸ್ಪರ್ಧೆಯನ್ನು ಶುಚಿತ್ವ ಮಿಷನ್ ಏರ್ಪಡಿಸಲಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು, ಕಲಾವಿದರು, ವಿದ್ಯಾಲಯಗಳು, ಸಮಸ್ಥೆಗಳು, ಜಾಹೀರಾತು ಏಜೆನ್ಸಿಗಳು ಸಹಿತ ವ್ಯಕ್ತಿ-ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಎಂಟ್ರಿಗಳು ಎತ್ರೀ ಗಾತ್ರದ ಶೀಟ್ ನಲ್ಲಿ ಡಿಜಿಟಲ್ ಪ್ರಿಂಟ್ ರೂಪದಲ್ಲಿ ಅ.14ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ರಾಜ್ಯ ಶುಚಿತ್ವ ಮಿಷನ್ ಕಚೇರಿಗೆ ನೇರವಾಗಿ, ಸಾಫ್ಟ್ ಕಾಪಿ ಎಂಬ ಈ ಮೇಲ್ ಗೂ ಕಳುಹಿಸಬೇಕು. ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ 10 ಸಾವಿರ ರೂ. ಬಹುಮಾನ ಲಭಿಸಲಿದೆ.