ಗುವಾಹಟಿ: ಅರುಣಾಚಲ ಪ್ರದೇಶದ ಚಂಗ್ಲಾಂಘ್ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದಾರೆ.
ಅಸ್ಸಾಮ್ ರೈಫಲ್ಸ್ ನ ವಾಹನದ ಮೇಲೆ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಮ್ (ಯುಎಲ್ಎಪ್ಫ್ಎ) ಹಾಗೂ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ನ ಯುಂಗ್ ಆಂಗ್ ಫ್ಯಾಕ್ಷನ್ ನ 30-35 ಉಗ್ರರು ದಾಳಿ ನಡೆಸಿದ್ದಾರೆ.
ಅಸ್ಸಾಂ ರೈಫಲ್ಸ್ ನ ಸಿಬ್ಬಂದಿಗಳು ನೀರನ್ನು ತರಲು ಹೋದಾಗ 19 ಸಿಬ್ಬಂದಿಗಳಿದ್ದ ವಾಟರ್ ಟ್ಯಾಂಕರ್ ನ ಮೇಲೆ ಜೈರಾಮ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹೆಟ್ಲಾಂಗ್ ಗ್ರಾಮದಲ್ಲಿ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ.
ಚಂಗ್ಲಾಂಗ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವಂಶ್ ಯಾದವ್ ಅವರು ಈ ಘಟನೆಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರು ಐಇಡಿ ಸ್ಫೋಟಿಸಿರುವ ವರದಿಯನ್ನು ಯಾದವ್ ಅವರು ನಿರಾಕರಿಸಲೂ ಇಲ್ಲ ಒಪ್ಪಿಕೊಳ್ಳಲೂ ಇಲ್ಲ. ಘಟನಾ ಸ್ಥಳದಲ್ಲಿ ಸ್ಫೋಟ ಸಂಭವಿಸಿತ್ತು. ಅಟಾಪ್ಸಿ ವರದಿ ಬರುವವರೆಗೂ ನಾವು ಯಾವುದನ್ನು ಸ್ಪಷ್ಟಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.