ಕಾಸರಗೋಡು: ರಾಷ್ಟ್ರಪಿತ ಬಾಪೂಜಿ ಅವರ ಜೀವನ ಸಂದೇಶವನ್ನು ಎಳೆಯ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶದಿಂದ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಕಚೇರಿ ನೇತೃತ್ವದಲ್ಲಿ ಗಾಂಧಿ ಜಯಂತಿ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ನಡೆಸಿದ್ದ ವಿವಿಧ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಗಾಂಧಿ ವೇಷ ಸ್ಪರ್ಧೆಯಲ್ಲಿ ಫಿಯಾನ್ ರೋಡ್ರಿಗಸ್ ಪೈಕ ಪ್ರಥಮ ಬಹುಮಾನ, ಅಜಿಲ್ ದೇವ್ ತ್ರಿಕರಿಪುರ ದ್ವಿತೀಯ ಬಹುಮಾನ ಗಳಿಸಿದರು. ಭಾಷಣ ಸ್ಪರ್ಧೆಯಲ್ಲಿ ವೆಳ್ಳರಿಕುಂಡ್ ಕಾನ್ವೆಂಟ್ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಷಾರೋನ್ ಜೋಸೆಫ್ ಪ್ರಥಮ, ಕಾಸರಗೋಡು ನವೋದಯ ವಿದ್ಯಾಲಯದ ಆರ್ಯಾ ನಾರಾಯಣನ್ ಎಂ.ಕೆ. ಕುಂಡಂಕುಳಿ ದ್ವಿತೀಯ ಬಹುಮಾನ ಪಡೆದರು. ಕವಿತಾಲಾಪನೆ ಸ್ಪರ್ಧೆಯಲ್ಲಿ ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಭಗತ್ ಜೀವನ್ ಪ್ರಥಮ, ಬಳಾಂತೋಡು ಸರಕಾರಿ ಶಾಲೆಯ ಶಿವರಂಜಿನಿ ಪಿ.ವಿ. ದ್ವಿತೀಯ ಬಹುಮಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ಮತ್ತು ಅರ್ಹತಾಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಅರ್ಹತಾಪತ್ರ ಲಭಿಸಲಿದೆ.