ವಾಷಿಂಗ್ಟನ್: ಕೋವಿಡ್-19 ಸೋಂಕು ತಗುಲಿದ ನಂತರ ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದೆ ಶನಿವಾರ ಸಂಜೆ ಶ್ವೇತಭವನದ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾನು ಆರೋಗ್ಯವಾಗಿದ್ದು, ಚೀನಾ ವೈರಸ್ ಕಣ್ಮರೆಯಾಗಲಿದೆ ಎಂದು ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಸೋಂಕು ನಾಪತ್ತೆಯಾಗಲಿದೆ ಎಂದು ಹೇಳಿದ ಟ್ರಂಪ್,ನಮ್ಮ ರಾಷ್ಟ್ರವು ಮಾರಕ ಚೀನಾ ವೈರಸ್ ಅನ್ನು ಸೋಲಿಸಲಿದೆ ಎಂಬುದನ್ನು ಸಾರ್ವಜನಿಕರು ತಿಳಿಯಲು ಬಯಸುವುದಾಗಿ ಹೇಳಿದರು.
210000ಕ್ಕೂ ಹೆಚ್ಚು ಅಮೆರಿಕದ ಜನರ ಸಾವಿಗೆ ಕಾರಣವಾಗಿರುವ ಮಾರಕ ವೈರಸ್ ಕಣ್ಮರೆಯಾಗಲಿದೆ ಎಂದು ಹೇಳಿದ ಟ್ರಂಪ್, ಮತ್ತೊಮ್ಮೆ ವೈರಸ್ ಅಟ್ಟಹಾಸ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದರು.18 ನಿಮಿಷಗಳ ಭಾಷಣದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಟ್ರಂಪ್ ಮಾತನಾಡಿದರು.
ಒಂಬತ್ತು ದಿನಗಳ ಹಿಂದೆ ಕೋವಿಡ್ -19 ಫಾಸಿಟಿವ್ ನಿಂದಾಗಿ ಪ್ರಚಾರವನ್ನು ನಿಲ್ಲಿಸಿದ್ದ ಟ್ರಂಪ್ ಮತ್ತೆ ಮತ್ತೆ ಪ್ರಚಾರ ನಡೆಸಲು ದಿನಗಳನ್ನು ಕಾಯುತ್ತಿದ್ದು, ಶನಿವಾರ ಪ್ರಚಾರದ ರೀತಿಯಲ್ಲಿಯೇ ಶ್ವೇತಭವನದಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು.
ಮಂಗಳವಾರ ಯುದ್ಧಭೂಮಿ ಪೆನ್ಸಿಲ್ವೇನಿಯಾ ಮತ್ತು ಬುಧವಾರ ಅಯೋವಾದಲ್ಲಿ ಟ್ರಂಪ್ ಪ್ರಚಾರ ಸಮಾವೇಶ ನಡೆಯುವುದಾಗಿ ಘೋಷಿಸಲಾಗಿದೆ.