ತಿರುವನಂತಪುರಂ: ರಾಜ್ಯ ಸರ್ಕಾರದ ವಿರುದ್ಧ ಆಂದೋಲನ ಮುಂದುವರಿಯಲಿದೆ ಎಂದು ಯುಡಿಎಫ್ ನೂತನ ಕನ್ವೀನರ್ ಎಂ.ಎಂ.ಹಸನ್ ಹೇಳಿದ್ದಾರೆ. ಕೋವಿಡ್ ಮಾನದಂಡಗಳನ್ನು ಅನುಸರಿಸಿ ಹೆಚ್ಚಿನ ಜನಸಂದಣಿ ಮತ್ತು ಪ್ರದರ್ಶನಗಳಿಲ್ಲದೆ ಮುಷ್ಕರ ನಡೆಯಲಿದೆ. ಅ. 12 ರಂದು ರಾಜ್ಯದ ಎಲ್ಲೆಡೆ ಐದೈದು ಸದಸ್ಯರ ಮುಷ್ಕರ ನಡೆಯಲಿದೆ ಎಂದು ಅವರು ಭಾನುವಾರ ವಿವರ ನೀಡಿರುವರು.
ಕೇರಳದಲ್ಲಿ ಕೋವಿಡ್ ರಕ್ಷಣಾ ಚಟುವಟಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಚಿನ್ನ ಕಳ್ಳಸಾಗಣೆ ಪ್ರಕರಣ ಹೊರಬಿದ್ದ ನಂತರವೇ ರಾಜ್ಯದಲ್ಲಿ ಕೋವಿಡ್ ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಎಂ.ಎಂ.ಹಸನ್ ಹೇಳಿದ್ದಾರೆ.
ಐದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸಲು ಅವಕಾಶ ನೀಡಬಾರದು ಎಂಬ ಸರ್ಕಾರದ ನಿರ್ದೇಶನವನ್ನು ಯುಡಿಎಫ್ ಪಾಲಿಸುತ್ತದೆ ಮತ್ತು ಮುಖ್ಯಮಂತ್ರಿಗಳು ತಮ್ಮ ಸಂಪುಟದಲ್ಲಿರುವವರು ಹೇಗೆ ಅನಾರೋಗ್ಯಕ್ಕೆ ಒಳಗಾದರು ಎಂಬುದಕ್ಕೆ ಸ್ಪಂದಿಸಬೇಕು ಎಂದು ಎಂ.ಎಸ್.ಹಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ಸೆಪ್ಟೆಂಬರ್ 28 ರಂದು ಸರ್ಕಾರದ ವಂಚನೆಗಳ ವಿರುದ್ದ ಯುಡಿಎಫ್ ನಡೆಸುತ್ತಿರುವ ನೇರ ಮುಷ್ಕರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಕೋವಿಡ್ ಸೋಂಕು ವ್ಯಾಪಕಗೊಳ್ಳುವಲ್ಲಿ ಸರ್ಕಾರದ ವಿರುದ್ದ ಯುಡಿಎಫ್ ನಡೆಸುತ್ತಿರುವ ಪ್ರತಿಭಟನೆ ಕಾರಣವಾಗುತ್ತಿದೆ ಎಂದು ಸರ್ಕಾರ ಮತ್ತು ಸಿಪಿಎಂ ನೀಡಿದ ಹೇಳಿಕೆಯ ಬಳಿಕ ಯುಡಿಎಫ್ ಆಂದೋಲನದಿಂದ ಹಿಂದೆ ಸರಿಯಿತು. ಇದೇ ವೇಳೆ ಪ್ರತಿಪಕ್ಷಗಳು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಬಿಜೆಪಿ ಆರೋಪಿಸಿದೆ.
'ಬಿಜೆಪಿ-ಸಿಪಿಎಂ ಪರಸ್ಪರ ಒಪ್ಪಂದ ಮಾಡಿಕೊಂಡಿದೆ. ಅದರ ಒಂದು ಭಾಗವಾಗಿ ಪಿಣರಾಯಿ ಅವರು ಮೋದಿ ವಿರುದ್ಧ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ರಾತ್ರಿಯ ಕತ್ತಲೆಯಲ್ಲಿ, ಬಿಜೆಪಿ ಮತ್ತು ಸಿಪಿಎಂ ಸಹೋದರರು 'ಎಂದು ಎಂ.ಎಂ.ಹಸನ್ ತೀವ್ರ ವಾಗ್ದಾಳಿ ನಡೆಸಿರುವರು.