ಕೊಚ್ಚಿ: ಹಿರಿಯ ಸಿಪಿಎಂ ನಾಯಕ ಎ. ಎ. ಲಾರೆನ್ಸ್ ಅವರ ಪುತ್ರ, ನ್ಯಾಯವಾದಿ.ಅಬ್ರಹಾಂ ಲಾರೆನ್ಸ್ ಶನಿವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಆನ್‍ಲೈನ್‍ನಲ್ಲಿ ಮೂಲಕ ಸದಸ್ಯತ್ವ ವಿತರಿಸುವರೆಂದು ತಿಳಿದುಬಂದಿದೆ.
ಅಬ್ರಹಾಂ ಲಾರೆನ್ಸ್ ಅವರು ಬಿಜೆಪಿಯ ರಾಜಕೀಯ ವ್ಯವಸ್ಥೆಗೆ ಆಕರ್ಷಿತರಾಗಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ ಎಂದು ಕೊಚ್ಚಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಸಿಪಿಎಂ ತನ್ನ ಆದರ್ಶಗಳಿಂದ ವಿಮುಖವಾಗುತ್ತಿದೆ. ಬಿನೀಶ್ ಕೊಡಿಯೇರಿ ಎಸಗಿರುವ ಕುಕೃತ್ಯ ವಿರೋಧಿಸಿ ಸಿಪಿಎಂ ಪಕ್ಷವನ್ನು ತೊರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಸಿಪಿಎಂ ಸದಸ್ಯರಾಗಿರುವ ತನ್ನ ತಂದೆ ಎ.ಎ.ಲಾರೆನ್ಸ್ ಅವರಿಗೆ ಬಿಜೆಪಿಗೆ ಸೇರುವ ಬಗ್ಗೆ ತಿಳಿಸಿಲ್ಲ ಎಂದು ಹೇಳಿದರು.