ಕಾಸರಗೋಡು: ಜ್ವರದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಮೃತಪಟ್ಟಿದ್ದು, ಬಳಿಕವಷ್ಟೇ ಅವರಿಗೆ ಕೋವಿಡ್ ದೃಢಪಟ್ಟಿತು. ಇದೇ ವೇಳೆ ಅವರೊಂದಿಗೆ ಬಂದ ವ್ಯಕ್ತಿ ನಕಲಿ ವಿಳಾಸ ನೀಡಿ ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ. ಇದೀಗ ಮೃತವ್ಯಕ್ತಿ ಯಾರೆಂದು ತಿಳಿಯದೆ ಆಸ್ಪತ್ರೆಯ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ತೀವ್ರ ಜ್ವರದಿಂದ ರೋಗಿ ಮೃತಪಟ್ಟರು.
ಆವಿಕ್ಕರ ಫಾತಿಮಾ ಕ್ವಾರ್ಟರ್ಸ್ ನಿವಾಸಿ ಶಾಜಿ (45) ಅವರು ಆಸ್ಪತ್ರೆಗೆ ನೀಡಿದ ವಿಳಾಸ. ದಾಖಲಾಗಿ ಒಂದು ಗಂಟೆಯಲ್ಲಿ ರೋಗಿಯು ಮೃತಪಟ್ಟನು. ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಸಕಾರಾತ್ಮಕವೆಂದು ಕಂಡುಬಂದಿದೆ. ಇದರೊಂದಿಗೆ ಅವರೊಂದಿಗೆ ಬಂದ ವ್ಯಕ್ತಿ ನಾಪತ್ತೆಯಾಗಿದ್ದ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಹೊಸದುರ್ಗ ಪೆÇಲೀಸರಿಗೆ ಮಾಹಿತಿ ನೀಡಿದರು.
ಅಂತಹ ವ್ಯಕ್ತಿಯು ಅವಿಕ್ಕರ ಫಾತಿಮಾ ಕ್ವಾರ್ಟಸ್ರ್ನಲ್ಲಿ ವಾಸಿಸುತ್ತಿಲ್ಲ ಎಂದು ಪೆÇಲೀಸ್ ತನಿಖೆಯಿಂದ ತಿಳಿದುಬಂದಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೆÇಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೆ, ಆತನೂ ಸಹ ಕೋವಿಡ್ ಸೋಂಕಿಗೊಳಗಾಗಿರಬಹುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಪರಿಚಿತ ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ.