ಮಂಜೇಶ್ವರ: ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಕೃಷ್ಣೈಕ್ಯರಾದ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರ ಸಂಸ್ಮರಣೆ ಹಾಗೂ ಬಳಿಕ ಪ್ರಸಿದ್ಧ ಕಲಾವಿದರಿಂದ ಶಲ್ಯ-ಶಲ್ಯ ತಾಳಮದ್ದಳೆ ಜರಗಿತು.
ಹಿರಿಯ ಯಕ್ಷಗಾನ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್ ಸಂಸ್ಮರಣಾ ಭಾಷಣ ನಡೆಸಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತೋಡಿ. ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ನ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ ಉಪಾಧ್ಯಕ್ಷ ಗೋಪಾಲಕೃಷ್ಣ ಎಸ್ ಚಿಗುರುಪಾದೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಮೂಡಂಬೈಲು, ಯೋಗೀಶ ರಾವ್ ಚಿಗುರುಪಾದೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರು ಸಿರಿಬಾಗಿಲು ರಾಮಕೃಷ್ಣ ಮಯ್ಯ ಚೆಂಡೆ ಮದ್ದಳೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು ಲವಕುಮಾರ್ ಆಚಾರ್ಯ ಐಲ ಚಕ್ರ ತಾಳದಲ್ಲಿ ಮುರಾರಿ ಭಟ್ ಪಂಜಿಗದ್ದೆ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಶಲ್ಯನಾಗಿ ರಾಧಾಕೃಷ್ಣ ಕಲ್ಚಾರ್ ಹಾಗೂ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಕರ್ಣ ವಾಸುದೇವ ರಂಗಾ ಭಟ್ ಮಧೂರು ಕೌರವÀ ಸದಾಶಿವ ಆಳ್ವ ತಲಪಾಡಿ ನಿರ್ವಹಿಸಿದ್ದರು.
ರಾತ್ರಿ ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ವತಿಯಿಂದ ದುರ್ಗಾಸ್ತುತಿ ಪಾರಾಯಣ ಜರಗಿದ್ದು ನಳಿನಿ ಟೀಚರ್, ರಾಧಾಮಣಿ ಟೀಚರ್, ಜಯಲಕ್ಷ್ಮಿ ಚಿಗುರುಪಾದೆ ಹಾಗೂ ಸೌಮ್ಯ ಪ್ರಕಾಶ್ ಮದಂಗಲ್ಲು ಪಾರಾಯಣದ ನೇತೃತ್ವ ವಹಿಸಿದ್ದರು.