ಕಾಸರಗೋಡು: ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದ 5 ನೇ ತರಗತಿ ವಿದ್ಯಾರ್ಥಿನಿಯಾದ ಅಭಿಜ್ಞಾಳಿಗೆ ದ್ವಾರಕ ನಗರದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಭಾರತೀಯ ವಿದ್ಯಾನಿಕೇತನ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಗಣೇಶ್ ಅವರು ಮಾತನಾಡಿ ಈ ಬಾಲಕಿಯ ಸಾಧನೆಯಿಂದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಲಿ ಎಂದು ಹಾರೈಸಿದರು.
ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ ಕಾರ್ಯದರ್ಶಿ ಮಾಧವ ಹೇರಳ ಅವರು ಅಭಿಜ್ಞಾಳಿಗೆ ಶಾಲು ಹೊದಿಸಿ ಸ್ಮರಣಿಕೆ ಹಾಗು ನಗದು ಬಹುಮಾನ ನೀಡಿ ಬಾಲಕಿಯ ಸಾಧನೆಗೆ ಅಭಿನಂದನೆ ಸಲ್ಲಿಸಿ 10 ನೇ ತರಗತಿ ವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡುವ ಕೊಡುಗೆಯನ್ನು ನೀಡಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಈ ಬಾಲಕಿಯಿಂದ ಇನ್ನಷ್ಟು ಸಾಧನೆಗಳು ದಾಖಲಾಗಲಿ ಎಂದು ಹಾರೈಸಿದರು.
ವಿದ್ಯಾಲಯದ ಪ್ರಾಂಶುಪಾಲೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಬಾಲಕಿಯ ತಾಯಿ ತೇಜ ಕುಮಾರಿ ಉಪಸ್ಥಿತರಿದ್ದರು. ಹೇಮಲತಾ ಬಿ.ಎಂ. ಸ್ವಾಗತಿಸಿ, ಚಂಚಲಾಕ್ಷಿ ಕೆ. ವಂದಿಸಿದರು. ಶಿಕ್ಷಕಿ ಮಮತಾ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದ ಬೆಳ್ತಂಗಡಿಯ ಬೋಧಿ ಮೀಡಿಯಾ ಆಯೋಜಿಸಿನ ಆನ್‍ಲೈನ್ ಯೋಗ ಸ್ಪರ್ಧೆಯಲ್ಲಿ 3 ನಿಮಿಷದಲ್ಲಿ 53 ಯೋಗಾಸನಗಳನ್ನು ಪ್ರದರ್ಶಿಸಿ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿದ್ದಾರೆ. ಶಾಲೆಯ ಯೋಗ ಶಿಕ್ಷಕಿ ಮಮತಾ ಕೆ.ಆರ್. ಅವರಿಂದ ಅಭಿಜ್ಞಾ ಮಾರ್ಗದರ್ಶನ ಪಡೆದಿದ್ದರು.