ಕುಂಬಳೆ: ಬಿಜೆಪಿಯ ಸಕ್ರಿಯ ಕಾರ್ಯಕರ್ತ ವಿನು ಕಡಪ್ಪುರ ಅವರ 20 ನೇ ವರ್ಷದ ಬಲಿದಾನ ದಿನವನ್ನು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಪಂಚಾಯತ್ ಅಧ್ಯಕ್ಷರಾದ ಕೆ.ಸುಧಾಕರ ಕಾಮತ್ ಅವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸುರೇಶ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ವಿನೋದ್ ಕಡಪ್ಪುರ, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ, ಬಿಜೆಪಿ ಪಂಚಾಯತ್ ಉಪಾಧ್ಯಕ್ಷ ಸುಜಿತ್ ರೈ, ಯುವ ಮೋರ್ಚ ಮಂಡಲ ಪ್ರದಾನ ಕಾರ್ಯದರ್ಶಿ ಪ್ರದೀಪ್ ಬಂಬ್ರಾಣ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. ಯುವ ಮೋರ್ಚ ಕುಂಬಳೆ ಅಧ್ಯಕ್ಷರಾದ ಪ್ರದೂಷ್ ಸ್ವಾಗತಿಸಿ, ಶಿವಪ್ರಸಾದ್ ರೈ ವಂದಿಸಿದರು.