ಕಾಸರಗೋಡು: ಚಟ್ಟಂಚಾಲ್ ನಲ್ಲಿ ಟಾಟಾ ಕೋವಿಡ್ ಆಸ್ಪತ್ರೆ ತೆರೆಯುವ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಜಿಲ್ಲೆಯ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು.
ಆಸ್ಪತ್ರೆಯನ್ನು ಶೀಘ್ರ ತೆರೆಯಲಾಗುವುದು ಎಂಬ ಸರ್ಕಾರದ ಇತ್ತೀಚಿನ ಘೋಷಣೆಯು ಯುಡಿಎಫ್ ಆಯೋಜಿಸಿದ ಆಮರಣಾಂತ ಉಪವಾಸ ಸತ್ಯಾಗ್ರಹ ಘೋಷಣೆಯ ಬಳಿಕ ಸರ್ಕಾರವು ಮುಷ್ಕರವನ್ನು ಮುರಿಯುವ ತಂತ್ರವಾಗಿತ್ತು ಎಂದವರು ತರಾಟೆಗೆ ತೆಗೆದುಕೊಂಡರು.
ಒಬ್ಬ ವೈದ್ಯ ಮತ್ತು 12 ದಾದಿಯರೊಂದಿಗೆ ದಾಖಲಾದ 50 ರೋಗಿಗಳೊಂದಿಗೆ ಆಸ್ಪತ್ರೆ ಪ್ರಾರಂಭವಾಗಲಿದೆ ಎಂಬ ಡಿಎಂಒ ಹೇಳಿಕೆ ಗಿಮಿಕ್ ಆಗಿದೆ. ಟಾಟಾ ಆಸ್ಪತ್ರೆ ಕೇವಲ ಕೋವಿಡ್ ಮೊದಲ ಹಂತದ ಚಿಕಿತ್ಸಾ ಕೇಂದ್ರವಷ್ಟೇ ಆಗಿದೆ. ಆದರೆ ಇದನ್ನು ಜನರಿಗೆ ಆರೋಗ್ಯ ಸೌಲಭ್ಯವಾಗಿ ಎಲ್ಲಾ ಚಿಕಿತ್ಸೆಗಳನ್ನೊಳಗೊಳ್ಳವಂತೆ ಪರಿವರ್ತಿಸಬೇಕು. ಕೆಪಿಸಿಸಿ ಪದಾಧಿಕಾರಿಗಳನ್ನು ಒಳಗೊಂಡ ತಂಡವು ಇಂದು ಕಲೆಕ್ಟರ್ ಮತ್ತು ಡಿಎಂಒ ಅವರಿಗೆ ಈ ಬಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಾನು ಹೇಳುತ್ತಿರುವುದು ಸುಳ್ಳು ಎಂದಾದರೆ ನಾನು ಸರ್ಕಾರದ ಕ್ಷಮೆಯಾಚಿಸಲು ಸಿದ್ದ ಮತ್ತು ಮುಷ್ಕರದಿಂದ ಹಿಂದೆ ಸರಿಯುತ್ತೇನೆ ಎಂದು ಸಂಸದರು ತಿಳಿಸಿರುವರು.