ಬದಿಯಡ್ಕ: ಚಿನ್ನ ಕಳ್ಳ ಸಾಗಣೆ, ಪಿ ಎಸ್ ಸಿ ಹಿಂಬಾಗಿಲು ನೇಮಕಾತಿ, ಲೈಫ್ ಮಿಷನ್ ಭ್ರಷ್ಟಾಚಾರಗಳೇ ಮೊದಲಾದ ಹಗರಣಗಳಲ್ಲಿ ಮುಳುಗಿರುವ ಸಿ ಪಿ ಎಂ ನೇತೃತ್ವದ ಎಲ್ ಡಿ ಎಫ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರಾದ ಕೆ ಟಿ ಜಲೀಲ್ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕುದ್ರೆಪ್ಪಾಡಿ ಆಗ್ರಹಿಸಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತಿ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ಮಾರ್ಪನಡ್ಕದಲ್ಲಿ ನಡೆದ "ನಿಂತು ಸಮರ" ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿ ಪಿ ಎಂ ನೇತಾರರು ಇಂದು ತಲೆ ಮರೆಸಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯು ಡಿ ಎಫ್ ಹಾಗೂ ಎಲ್ ಡಿ ಎಫ್ ಈ ಎರಡು ರಂಗಗಳು ಭ್ರಷ್ಟಾಚಾರ ಹಾಗೂ ವಂಚನೆ ನಡೆಸುವಲ್ಲಿ ಪೈಪೆÇೀಟಿಯಲ್ಲಿವೆ. ಇದು ಕೇರಳಕ್ಕೆ ಶಾಪವಾಗಿದೆ ಎಂದೂ ಅವರು ಆರೋಪಿಸಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತಿ ಸಮಿತಿ ಉಪಾಧ್ಯಕ್ಷ ಬಿ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತಾಡಿ ಭ್ರಷ್ಟಾಚಾರ, ವಂಚನೆ, ಬಲಾತ್ಕಾರ ಕೃತ್ಯ, ಭಯತ್ಪಾಧಕರ ಆಶ್ರಯ ಕೇಂದ್ರವಾಗಿ ಕೇರಳವನ್ನು ಮಾರ್ಪಡಿಸಿದ ಪಿಣರಾಯಿ ವಿಜಯನ್ ಸರ್ಕಾರದ ಆಡಳಿತದಿಂದಾಗಿ ಕೇರಳದ ಜನತೆ ದೇಶದಲ್ಲೇ ತಲೆತಗ್ಗಿಸುವಂತಾಗಿದೆ. ಭ್ರಷ್ಟಾಚಾರದ ಹೊಣೆಹೊತ್ತು ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶೈಲಜಾ ಭಟ್, ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶರ್ಮ, ಸುಂದರ ಮವ್ವಾರ್, ಮಂಡಲ ಸಮಿತಿ ಸದಸ್ಯ ವಾಸುದೇವ ಭಟ್, ಪಂಚಾಯತಿ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಉಪಾಧ್ಯಕ್ಷ ವೈ ಕೆ ಗಣಪತಿ ಭಟ್, ಕಾರ್ಯದರ್ಶಿ ಪ್ರಜೇಶ್, ನೇತಾರರಾದ ಕೀರ್ತನ್ ಗೋವಿಂದ, ಶಾಂತಾ ಎಸ್ ಭಟ್, ಪ್ರಮೋದ್ ಭಂಡಾರಿ, ರಘು ಮಚಾವ್ ಮೊದಲಾದವರು ಉಪಸ್ಥಿತರಿದ್ದರು. ಶಶಿಧರ ಟಿ ಸ್ವಾಗತಿಸಿ, ಪ್ರಜೇಶ್ ವಂದಿಸಿದರು.