ಪತ್ತನಂತಿಟ್ಟು: ಶಬರಿಮಲೆಯಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ಅಲ್ಲಿಯ ಜಿಲ್ಲಾ ಆಡಳಿತವು ಸಮರೋಪಾದಿಯ ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ. ಕ್ಷೇತ್ರ ದರ್ಶನವನ್ನು ಕಠಿಣ ನಿರ್ಬಂಧಗಳೊಂದಿಗೆ ಸುವ್ಯವಸ್ಥಿತಗೊಳಿಸುವಂತೆ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ. ಭಕ್ತರು ಕೋವಿಡ್ ಮಾನದಂಡಗಳನ್ನು ಪೂರೈಸುವಂತೆ ನೋಡಿಕೊಳ್ಳುವುದು ಪೆÇಲೀಸರ ಕರ್ತವ್ಯವಾಗಿರುತ್ತದೆ.
ಮಂಡಲ ಪೂಜೆ ಮತ್ತು ಮಕರವಿಳಕ್ ಗೆ ಶಬರಿಮಲೆ ಸಜ್ಜುಗೊಳ್ಳಬೇಕಿದ್ದು ಕೋವಿಡ್ ಹಿನ್ನೆಲೆಯಲ್ಲಿ ಭಾರೀ ಮುನ್ನೆಚ್ಚರಿಕೆಗಳು ಬೇಕಾಗಲಿವೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಯಾವುದೇ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ಪತ್ತನಂತಿಟ್ಟು ಜಿಲ್ಲಾಡಳಿತ ಮತ್ತು ದೇವಸ್ವಂ ಮಂಡಳಿ ಶ್ರಮಿಸುತ್ತಿದೆ. ಪ್ರಸ್ತುತ ಮೊದಲಾಗಿ ನಡೆಯಲಿರುವ ತುಲಾಮಾಸದ ಪೂಜೆಗೆ ದಿನಕ್ಕೆ 250 ಜನರನ್ನು ಮಾತ್ರ ಪ್ರವೇಶಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಇದಕ್ಕೂ ಮೊದಲು ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಪಂಪಾ ತ್ರಿವೇಣಿಗೆ ಇಳಿಯಲು ಅನುಮತಿ ಇಲ್ಲದಿರುವುದರಿಂದ, ಭಕ್ತರು ಸ್ನಾನ ಮಾಡುವ ಬದಲು ಬೇರೆ ವ್ಯವಸ್ಥೆ ಮಾಡಲಾಗುವುದು. ಪ್ಲಾಂಟೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಶಬರಿಮಲೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಇದಕ್ಕಾಗಿ ಕೆ.ಎಸ್.ಆರ್.ಟಿ.ಸಿ.ಯ ಸಣ್ಣ ವಾಹನಗಳನ್ನು ವ್ಯವಸ್ಥೆಗೊಳಿಸಲಾಗುವುದು. ಕ್ಷೇತ್ರದ ಪರ್ವ ಕಾಲಗಳು ಪ್ರಾರಂಭವಾಗುವ ಮೊದಲು ಶಬರಿಮಲೆ ರಸ್ತೆ ಪೂರ್ಣಗೊಳ್ಳಲಿದ್ದು, ಸಂಚಾರವನ್ನು ಪುನಃಸ್ಥಾಪಿಸಲಾಗುವುದು. ಆಂಟಿಜನ್ ಧನಾತ್ಮಕ ಪರೀಕ್ಷೆ ಮಾಡಿದವರನ್ನು ಬೇರೆಡೆಗೆ ಸ್ಥಳಾಂತರಿಸಲು ಸಿ.ಎಫ್.ಎಲ್.ಟಿ.ಸಿ.ಗಳನ್ನು ಸಿದ್ಧಪಡಿಸಲಾಗುತ್ತಿದೆ.