ಕಾಸರಗೋಡು: ಈ ಬಾರಿಯ ವಿಶ್ವ ದೃಷ್ಟಿ ದಿನಾಚರಣೆಯ ಸಂದೇಶವಾಗಿರುವ "ನೋಟದಲ್ಲಿದೆ ನಿರೀಕ್ಷೆ" ಎಂಬ ಸಂದೇಶವನ್ನು ಪ್ರಧಾನವಾಗಿಸಿಮೊಬೈಲ್ ಪೋಟೋಗ್ರಫಿ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ ಜಂಟಿ ವತಿಯಿಂದ ಈ ಸ್ಪರ್ಧೆ ಜರುಗುವುದು. ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಪೋಟೋ ಗಳನ್ನು ಅ.20ರ ಮುಂಚಿತವಾಗಿ demoksgd@gmail.com ಎಂಬ ಈ ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 9947334637, 9946105789.