ತಿರುವನಂತಪುರ: ಇ-ಸಂಜೀವನಿ ಟೆಲಿಮೆಡಿಸಿನ್ ಪ್ಲಾಟ್‍ಫಾರ್ಮ್ ಮೂಲಕ ಲಭ್ಯವಿರುವ ಔಷಧಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಿಂದ ಉಚಿತವಾಗಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಕೆ.ಕೆ. ಶೈಲಾಜಾ ಶನಿವಾರ ಮಾಹಿತಿ ನೀಡಿರುವರು. ಇದಲ್ಲದೆ, ಆಸ್ಪತ್ರೆಯಲ್ಲಿ ಲಭ್ಯವಿರುವ ಲ್ಯಾಬ್ ಪರೀಕ್ಷೆಗಳನ್ನು ಇ-ಸಂಜೀವನಿ ಚಿಕಿತ್ಸಾ ವಿಧಾನದ (ಪ್ರಿಸ್ಕ್ರಿಪ್ಷನ್) ಪ್ರಕಾರ ಮಾಡಬಹುದು. ಎಲ್ಲಾ ಇ-ಸಂಜೀವನಿ ಚಿಕಿತ್ಸೆಗಳು 24 ಗಂಟೆಗಳ ಕಾಲ ಲಭ್ಯವಿರಲಿದೆ. ಆದ್ದರಿಂದ, ಆಸ್ಪತ್ರೆಯ ಸೇವೆಯನ್ನು ಒಂದೇ ದಿನ ಬಳಸಬೇಕು. ಎಲ್ಲರಿಗೂ ಉಚಿತ ಇ-ಸಂಜೀವನಿ ಸೇವೆಗಳನ್ನು ಒದಗಿಸಬೇಕು ಎಂದರು.
ಇ-ಸಂಜೀವನಿ ಆರಂಭದಿಂದಲೂ ಭಾರತದಲ್ಲೇ ಆದರ್ಶಪ್ರಾಯವಾಗಿದೆ. ಈವರೆಗೆ ರಾಜ್ಯದಲ್ಲಿ 49,000 ಜನರು ಇ-ಸಂಜೀವನಿ ಸೇವೆಯನ್ನು ಬಳಸಿದ್ದಾರೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಜನರು ಸಾಮಾನ್ಯ ಒ.ಪಿ. ಗಳತ್ತ ಮುಖ ಮಾಡುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆ ಭೇಟಿಗಳನ್ನು ಇಲ್ಲವಾಗಿಸಲು ಇ-ಸಂಜೀವನಿ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿದಿನ 400 ಕ್ಕೂ ಹೆಚ್ಚು ಜನರು ಸೇವೆಯನ್ನು ಬಯಸುತ್ತಾರೆ. ಇ-ಸಂಜೀವನಿ ಮೂಲಕ ಸಮಾಲೋಚನೆ ಪೂರ್ಣಗೊಳಿಸಲು ಸುಮಾರು 6.52 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವ್ಯಕ್ತಿಗಳ ಸರಾಸರಿ ಸಂಭಾಷಣೆಯು ಸುಮಾರು 5.11 ನಿಮಿಷಗಳಷ್ಟಿರುತ್ತದೆ. ಇದು ಆಸ್ಪತ್ರೆಗಳತ್ತ ಸಂಚಾರ, ಸಮಯ ಮತ್ತು ಖರ್ಚುಗಳನ್ನೂ ನಿವಾರಿಸುತ್ತದೆ.
ಜನರಲ್ ಮೆಡಿಸಿನ್ ಒ.ಪಿ ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿದೆ. ಶಿಶು-ನವಜಾತ ವಿಭಾಗ ಒಪಿ ವಿಭಾಗವಿರಲಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೂ,ಮನಃಶಾಸ್ತ್ರ ವಿಭಾಗವು ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಸೇವೆರ ಲಭ್ಯವಿರಲಿದೆ.
ಜನರ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಈಗಿನ ಸಾಮಾನ್ಯ ಜನರಲ್ ಒಪಿ. ಸೇವೆಗಳ ಜೊತೆಗೆ, ವಿಶೇಷ ಸೇವೆಗಳನ್ನು ಸೇರಿಸಲು ಇ-ಸಂಜೀವನಿ ಸೇವೆಯನ್ನು ವಿಸ್ತರಿಸಲಾಗುತ್ತದೆ. ಕೇರಳದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮೂವತ್ತು ಪ್ರತಿಷ್ಠಿತ ಸಂಸ್ಥೆಗಳು ಇ ಸಂಜೀವನಿ ಮೂಲಕ ಉಚಿತ ಸೇವೆಗಳನ್ನು ನೀಡಲು ಪ್ರಾರಂಭಿಸಿವೆ.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಡಯಾಬಿಟಿಸ್, ತಿರುವನಂತಪುರ, ಇಮ್ಹಾನ್ಸ್ ಕೋಝಿಕ್ಕೋ, ಆರ್‍ಸಿಸಿ ತಿರುವನಂತಪುರ, ಕೊಚ್ಚಿನ್ ಕ್ಯಾನ್ಸರ್ ಸೆಂಟರ್, ಮಲಬಾರ್ ಕ್ಯಾನ್ಸರ್ ಸೆಂಟರ್, ತಲಶ್ಚೇರಿಯ ಒ.ಪಿ ಸೇವೆಗಳು ಇ-ಸಂಜೀವನಿ ಮೂಲಕ ಲಭ್ಯವಿದೆ. ಇದಲ್ಲದೆ, ಇ-ಸಂಜೀವನಿಯು ಮಲಪ್ಪುರಂ ಮತ್ತು ಕೋಝಿಕ್ಕೋಡ್ ಮುಂತಾದ ಜಿಲ್ಲೆಗಳ ಸರ್ಕಾರಿ ವಲಯದ ವಿಶೇಷ ವೈದ್ಯರ ನೇತೃತ್ವದಲ್ಲಿ ಒಪಿ ಮತ್ತು ಸಮಾಲೋಚನೆ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲೆಗಳ ಹದಿಹರೆಯದ ಚಿಕಿತ್ಸಾಲಯದಲ್ಲಿ ಸಲಹೆಗಾರರು ಸಮಾಲೋಚನೆ ಸೇವೆಗಳನ್ನು ಪ್ರಾರಂಭಿಸಿರುವರು.
ಜೀವನಶೈಲಿ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈಗಿನ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಇ-ಸಂಜೀವನಿ ಸಹಾಯ ಹಸ್ತವಾಗಿ ನೆರವಾಗಿದೆ. ಈ ವೇದಿಕೆಯ ಮೂಲಕ, ದಿನನಿತ್ಯದ ಚಿಕಿತ್ಸೆಗಳಿಗೆ ಅಡ್ಡಿಯಾಗದಂತೆ ಇಂತಹ ರೋಗಗಳನ್ನು ವೈಜ್ಞಾನಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಎದುರಿಸಲು ಸಾಧ್ಯವಿದೆ. ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಮೂಲಕ, ಮನೆ ಭೇಟಿ ಸಮಯದಲ್ಲಿ ಜನರಿಗೆ ಇ-ಸಂಜೀವನಿ ಸೇವೆಗಳನ್ನು ಪರಿಚಯಿಸುವ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.
ಮನೆಯಲ್ಲಿ ವೈದ್ಯರನ್ನು ಹೇಗೆ ನೋಡುವುದು?
ಮೊದಲ ಹಂತವೆಂದರೆ ಆನ್‍ಲೈನ್ ಸೈಟ್ https://esanjeevaniopd.in/ ಗೆ ಭೇಟಿ ನೀಡಿ ಅಥವಾ ಇ-ಸಂಜೀವನಿ ಅಪ್ಲಿಕೇಶನ್ https://play.google.com/store/apps/details?id=in.hied.esanjeevaniopd&hl=en_US ಅನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿ ಬಳಸಿ.
ನೀವು ಇಂಟರ್ನೆಟ್ ಪ್ರವೇಶದೊಂದಿಗೆ ಮೊಬೈಲ್ ಫೆÇೀನ್, ಲ್ಯಾಪ್‍ಟಾಪ್ ಅಥವಾ ಟ್ಯಾಬ್ ಹೊಂದಿದ್ದರೆ, ನೀವು esanjeevaniopd.in ಅನ್ನು ಪ್ರವೇಶಿಸಬಹುದು.
ನೀವು ಬಳಸುವ ಸಕ್ರಿಯ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ.
ಒದಗಿಸಿದ ಒಟಿಪಿ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿದ ನಂತರ ರೋಗಿಯು ಕ್ಯೂ ಅನ್ನು ನಮೂದಿಸಬಹುದು.
ವೀಡಿಯೊ ಕಾನ್ಫರೆನ್ಸ್ ಮೂಲಕ ನೀವು ನೇರವಾಗಿ ನಿಮ್ಮ ವೈದ್ಯರೊಂದಿಗೆ ರೋಗದ ಬಗ್ಗೆ ಮಾತನಾಡಬಹುದು. ಆನ್‍ಲೈನ್ ಸಮಾಲೋಚನೆಯ ನಂತರ ಪ್ರಿಸ್ಕ್ರಿಪ್ಷನ್ ಅನ್ನು ಡೌನ್‍ಲೋಡ್ ಮಾಡುವ ಮೂಲಕ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ಖರೀದಿಸಬಹುದು. ಇದಲ್ಲದೆ, ಪರೀಕ್ಷೆಗಳನ್ನು ಮಾಡಬಹುದು. ವಿಚಾರಣೆಗೆ ದಿಶಾ 1056 ಗೆ ಕರೆ ಮಾಡಬಹುದು.