ಉಪ್ಪಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ದುರ್ಗಾವಾಹಿನಿ ಮಾತೃಮಂಡಳಿ ಪೈವಳಿಕೆ ಪಂಚಾಯತ್ ಖಂಡ ಸಮಿತಿ ವತಿಯಿಂದ ರಾಷ್ಟ್ರೀಯ ಮಟ್ಟದ ಯೋಗ ಪಟು ಕುಮಾರಿ ಕಾವ್ಯಶ್ರೀ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಕಮಲ ಟೀಚರ್, ಭಜರಂಗದಳ ಸಂಯೋಜಕ ಪ್ರಸಾದ್ ಕೊಜಪ್ಪೆ, ಹಾಗು ಸಂಘಟನಾ ಕಾರ್ಯದರ್ಶಿ ಆನಂದ್ ಮತ್ತು ಮಹೇಶ್ ಬಾಯಾರ್ ಉಪಸ್ಥಿತರಿದ್ದರು.