ತಿರುವನಂತಪುರ: ಚಿಕಿತ್ಸೆ ಮತ್ತು ಕ್ವಾರಂಟೈನ್ ವ್ಯವಸ್ಥೆಯ ಏಕೀಕೃತ ವ್ಯವಸ್ಥೆಗೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕೋವಿಡ್ ಜಾಗ್ರತಾ ಐಡಿ ಕಡ್ಡಾಯಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಚಿಕಿತ್ಸೆ ಮತ್ತು ಕ್ವಾರಂಟೈನ್ ಗೆ ಒಳಗಾಗುವವರ ದೈನಂದಿನ ನಿರೀಕ್ಷಣೆ ಮತ್ತು ಟೆಲಿ-ಸಮಾಲೋಚನೆಗಾಗಿ ಪೆÇೀರ್ಟಲ್ ಸೌಲಭ್ಯಗಳನ್ನು ಹೊಂದಿದೆ. ನಿರೀಕ್ಷಣೆಯಲ್ಲಿರುವವರಿಗೆ ರೋಗಲಕ್ಷಣಗಳು ಕಂಡುಬಂದಲ್ಲಿ ಸಂಬಂಧಿತ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಇದರಿಂದ ಸುಲಭ ಸಾಧ್ಯವಾಗಲಿದೆ. ಜಾಗ್ರತಾ ಪೋರ್ಟಲ್‍ನಿಂದ ಸ್ವೀಕೃತ ಉಲ್ಲೇಖಿತ ಪತ್ರವನ್ನು ಆಸ್ಪತ್ರೆಗೆ ಕಳುಹಿಸಲಾಗುವುದು. ಇದರಿಂದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುತ್ತದೆ. ಕಾರುಣ್ಯ ಆರೋಗ್ಯ ವಿಮಾ ಯೋಜನೆ ವಿಮೆ ಪಡೆಯಲು ಮತ್ತು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೋವಿಡ್ 19 ಜಾಗ್ರತ್ ಐಡಿ ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
"ಕೆಲವು ಮಾಲ್ ಗಳು ರಜಾದಿನಗಳಲ್ಲಿ ಮತ್ತು ಸಂಜೆ ಹೆಚ್ಚಿನ ಜನಸಂದಣಿಯನ್ನು ಹೊಂದಿರುತ್ತವೆ. ಅನೇಕರು ಮಕ್ಕಳೊಂದಿಗೆ ಬರುತ್ತಾರೆ. ಕೆಲವು ಆಸ್ಪತ್ರೆ ಪ್ರದೇಶಗಳಲ್ಲಿ ಜನಸಂದಣಿ ಕೂಡ ಇದೆ. ಪರಿಶೀಲನೆ ಸಹಿತ ಇತರ ಅಗತ್ಯಗಳಿಗೆ ಆಸ್ಪತ್ರೆಗೆ ಬರುವ ಗರ್ಭಿಣಿಯರು ಆಸ್ಪತ್ರೆಯ ಸುತ್ತಮುತ್ತಲಿನ ಅಂಗಡಿಗಳಿಗೆ ಹೋಗಿ ಶಾಪಿಂಗ್ ಮಾಡುವುದನ್ನು ಗಮನಿಸಲಾಗಿದೆ. ರೋಗ ಹರಡುವಿಕೆಯನ್ನು ಹೆಚ್ಚಿಸುವಲ್ಲಿ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತಿವೆ.
ಕಣ್ಣೂರು ಜಿಲ್ಲೆಯಲ್ಲಿ "ಮಾಸ್ಕ್ ಇಲ್ಲದಿದ್ದರೆ ನೋ ಎಂಟ್ರಿ" ಮತ್ತು "ಝೀರೋ ಕಾಂಟ್ಯಾಕ್ಟ್" ಚಾಲೆಂಜ್ ಅಭಿಯಾನಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಆರೋಗ್ಯ ಇಲಾಖೆ ಸೂಚಿಸಿರುವ ನೀತಿ ಸಂಹಿತೆಯನ್ನು ಕೋವಿಡ್ ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಝೀರೋ ಕಾಂಟ್ಯಾಕ್ಟ್ ಚಾಲೆಂಜ್ ನ ಲಕ್ಷ್ಯವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ, ಕೋವಿಡ್ ತಡೆಗಟ್ಟುವಿಕೆಗಾಗಿ ಹೊಸ ಟಾಟಾ ಕೋವಿಡ್ ಕ್ವಾರಂಟೈನ್ ಆಸ್ಪತ್ರೆಯಲಲಿ 191 ಉದ್ಯೋಗಿಗಳ ನೇಮಕಕ್ಕೆ ಟಾಟಾ ಗ್ರೂಪ್ ನಿರ್ಧರಿಸಿದೆ ಮತ್ತು ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ. ಈ ಹುದ್ದೆಗಳನ್ನು ಒಂದು ವರ್ಷದವರೆಗೆ ತಾತ್ಕಾಲಿಕ / ಡೆಪ್ಯುಟೇಶನ್ ಆಧಾರದ ಮೇಲೆ ತಕ್ಷಣ ಭರ್ತಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿರುವರು.