ತೊಡುಪುಳ: ಇಡುಕ್ಕಿ ಜಿಲ್ಲೆಯ ಉಂಡಪ್ಲಾವ್‍ನಲ್ಲಿ ಐದು ವರ್ಷದ ಬಾಲಕನನ್ನು ಸಂಬಂಧಿಯೊಬ್ಬರು ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಅಸ್ಸಾಂ ಮೂಲದ ಐದರ ಹರೆಯದ ಮಗು ತೀವ್ರ ಘಾಸಿಗೊಳಗಾಯಿತು. ಬಾಲಕನನ್ನು ತಂದೆಯ ಸಹೋದರ ಹೊಡೆದಿದ್ದಾನೆಂದು ವರದಿಯಾಗಿದೆ.
ಥಳಿತದಿಂದ ಬಾಲಕನ ತಲೆಬುರುಡೆ ಮುರಿದು ಆಂತರಿಕ ರಕ್ತಸ್ರಾವವಾಗಿದೆ ಎಂದು ವರದಿಯಾಗಿದೆ. ಆದರೆ, ಮಗು ಜೀವಾಪಾಯದಿಂದ ಪಾರಾಗಿದೆ ಎಮದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ತೋಡುಪುಳ ಪೆÇಲೀಸರು ಬಾಲಕನ ತಂದೆಯ ಸಹೋದರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೂರಲ್ಲಿ ತಿಳಿಸಲಾಗಿದೆ. ಬಾಲಕನನ್ನು ಇಂದು ಬೆಳಿಗ್ಗೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ಸಾಂ ಮೂಲದ ಮಗನಾಗಿದ್ದು, ಈ ಪ್ರದೇಶದಲ್ಲಿ ಮರಗೆಲಸಕ್ಕಾಗಿ ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬದ ಬಾಲಕನಾಗಿದ್ದಾನೆ. ತಂದೆಯ ಸಹೋದರ ನಿರಂತರವಾಗಿ ಮಗುವನ್ನು ನಿಂದಿಸುತ್ತಿದ್ದು ಈ ಬಗ್ಗೆ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿನ್ನೆ ಸಂಜೆ ಬಾಲಕನನ್ನು ಮನೆಯಿಂದ ಹೊರಗೆ ಕರೆದು ಥಳಿಸಿ ಬಾಲಕನ ತಲೆ ನೆಲಕ್ಕೆ ಬಡಿದಿರುವನೆoದು ದೂರಲಾಗಿದೆ.