ಬದಿಯಡ್ಕ: ಕೊರೋನ ಉಸ್ತುವಾರಿ ಇದ್ದ ಸೂರಂಬೈಲ್ ಶಾಲೆಯ ಅದ್ಯಾಪಕ ಪದ್ಮನಾಭ ಅವರ ಮರಣ ಆರೋಗ್ಯ ಇಲಾಖೆಯ ಅಸಡ್ಡೆಯಿಂದ ನಡೆದಿದೆ ಎಂದು ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಆರೋಪಿಸಿದ್ದಾರೆ.
ಪದ್ಮನಾಭರವರು ಹಲವು ಬಾರಿ ಸಂಬಂಧಪಟ್ಟವರಿಗೆ ತನ್ನ ಸಮಸ್ಯೆಯನ್ನು ತಿಳಿಸಿದರೂ ಯಾರೂ ಕೂಡ ತನ್ನ ಸಹಾಯಕ್ಕೆ ಬಾರದಿರುವುದನ್ನು ಮಿತ್ರರಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ. ಇದರ ಪೂರ್ಣ ಹೊಣೆ ಆರೋಗ್ಯ ಇಲಾಖೆಗೆ ಆದ ಕಾರಣ ಪದ್ಮನಾಭರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಅಂಬೇಡ್ಕರ್ ವಿಚಾರ ವೇದಿಕೆ ಒತ್ತಾಯಿಸುತ್ತದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.