HEALTH TIPS

ಮಂಜೇಶ್ವರ ಕಿರು ಬಂದರು ಲೋಕಾರ್ಪಣೆ- ಕರಾವಳಿಯ ಏಳಿಗೆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

  

         ಮಂಜೇಶ್ವರ: ಕರಾವಳಿಯ ಏಳಿಗೆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.  

                  ಗುರುವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮಂಜೇಶ್ವರ ಬಂದರು ಉದ್ಘಾಟನೆ ನಡೆಸಿ ಅವರು ಮಾತನಾಡಿದರು. ರಾಜ್ಯದ ಕೊಯಿಲಾಂಡಿ ಬಂದರಿನ ಚಟುವಟಿಕೆಗಳಿಗೂ ಅವರು ಈ ವೇಳೆ ಚಾಲನೆ ನೀಡಿದರು. 

            ವಿವಿಧ ಯೋಜನೆಗಳ ಮೂಲಕ ಮೀನುಗಾರ ಸಮೂಹಕ್ಕೆ ಅಭಿವೃದ್ಧಿ ರಾಜ್ಯದಲ್ಲಿ ನಡೆದುಬರುತ್ತಿದೆ. ಇತರರ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ಮೀನುಗಾರಿಕೆ ವಲಯ ಬಲುದೊಡ್ಡ ಪ್ರಗತಿಯಲ್ಲಿದೆ. ಈ ಹಿಂದೆ ರಾಜ್ಯದಲ್ಲಿ 24 ಮೀನುಗಾರಿಕೆ ಬಂದರುಗಳಲ್ಲಿ 13 ಮಾತ್ರ ಪೂರ್ಣರೂಪದಲ್ಲಿ ಚಟುವಟಿಕೆ ನಡೆಸುತ್ತಿದ್ದುವು. ಇದು ಮೀನುಗಾರಿಕೆ ವಲಯಕ್ಕೆ ದೊಡ್ಡ ಸಮ್ಯೆಯಾಗಿತ್ತು. ನೂತನ ಬಂದರು ಆರಮಬಿಸುವುದಕ್ಕೆ ಮುನ್ನ ಇರುವ ಬಂದರುಗಳ ಸಮಸ್ಯೆ ಬಗೆಹರಿಸಲು ಈ ಬಾರಿಯ ಸರಕಾರ ಯತ್ನಿಸಿತ್ತು. ಇದು ಮೀನುಗಾರರಿಗೆ ಬಲು ಪ್ರಯೋಜನಕಾರಿಯಾಗಿತ್ತು. ಮುದಲಪ್ಪುಳ, ಚೇಟ್ಟುವ, ತಲಾಯಿ ಮೀನುಗಾರಿಕೆ ಬಂದರುಗಳನ್ನು ಈ  ಹಿಂದೆಯೇ ಕಮೀಷನ್ ನಡೆಸಲಾಗಿತ್ತು. ಈ ಮೂಲಕ ಪೂರ್ಣಪ್ರಮಾಣದಲ್ಲಿ ಚಟುವಟಿಕೆ ನಡೆಸುವ ಬಂದರುಗಳ ಸಮಖ್ಯೆ 18 ಆಗಿದೆ. ಇದಲ್ಲದೆ ಚೆಲ್ಲಾನಂ, ವೆಳ್ಳಯಿಲ್, ತಾನ್ನೂರು ಬಂದರುಗಳೂ ಈ ವರ್ಷವೇ ಕಮೀಷನ್ ಗೊಳ್ಳಲಿವೆ ಎಂದರು. 

                 ಬಂದರುಗಳ ನಿರ್ಮಾಣ, ಕಡಲತೀರ ಸಂರಕ್ಷಣೆಎ, ಕರಾವಳಿ ರಸ್ತೆ ನಿರ್ಮಾಣ ಸಹಿತ ಚಟುವಟಿಕೆಗಳು ಹೀಗೆ ವಿವಿಧ ಯೋಜನೆಗಳನ್ನು ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ವಹಿಸಿ ಜಾರಿಗೊಳಿಸುತ್ತಿದೆ. ಮೀನುಗಾರಿಕೆ ಬಂದರುಗಳ, ಮೀನು ಇಳಿಕಾ ಕೇಂದ್ರಗಳ ಸಹಿತ ಕೇಂದ್ರಗಳ ಚಟುವಟಿಕೆಗಳು ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಮುನ್ನಡೆ ಸಧಿಸಿವೆ ಎಂದವರು ನುಡಿದರು. 

    ಕೇಂದ್ರ ಸರಕಾರ ತನ್ನ ನೀತಿ ಬದಲಿಸಬೇಕು: ಮುಖ್ಯಮಂತ್ರಿ 

                        ರಾಜ್ಯಗಳ ಮೀನುಗಾರಿಕೆ ಬಂದರುಗಳ ನಿರ್ಮಾಣ ಈ ಹಿಂದೆ ಕೇಂದ್ರ ಸರಕಾರದ ಸಹಾಯ ಯೋಜನೆ ರೂಪದಲ್ಲಿ ಜಾರಿಗೆ ತರಲಾಗುತ್ತಿತ್ತು. ಸೇ 50 ರಿಂದ ಶೇ 75 ವರೆಗೆ ಕೇಂದ್ರ ಸರಕಾರ ಸಹಾಯ ನೀಡುತ್ತಿತ್ತು. ನಂತರ ಇದರಲ್ಲಿ ಕಡಿತವುಂಟು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾರ್ಬರ್ ಸಹಿತ ಹಿನ್ನೆಲೆ ಅಭಿವೃದ್ಧಿ ಚಟುವಟಿಕೆಗಳಿಗೆ ರಾಜ್ಯ ಸರಕಾರ ತನ್ನದೇ ರೀತಿ ನಿಧಿ ಕಂಡುಕೊಳ್ಳಬೇಕಾದ ಅಗತ್ಯ ಬರತೊಡಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ನೀತಿಯನ್ನು ಬದಲಿಸಬೇಕು. ಇಲ್ಲದೇ ಹೋದಲ್ಲಿ ಅಭಿವೃದ್ಧಿಗೆ ದೊಡ್ಡ ಆಗಾತ ತಲೆದೋರೀತು. ಹಿನ್ನೆಲೆ ಅಭಿವೃದ್ಧಗಾಗಿ ಕೇರದಲ್ಲಿ ವೆಚ್ಚ ಮಾಡಿರುವ 17.80 ಕೋಟಿ ರೂ. ಸಹಿತ ಈ ಹಂತದಲ್ಲಿ 57.14 ಕೋಟಿ ರೂ. ಕೇಂದ್ರ ಸರಕಾರದ ಪಾಲು ಈ ವರೆಗೆ ನೀಡಿಲ್ಲ. ಇಂಥಾ ಸಂದಿಗ್ಧತೆಯ ನಡುವೆಯೂ ರಾಜ್ಯ ಸರಕಾರ ತನ್ನ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಹಿಂದೇಟು ಹಾಕಿಲ್ಲ. ಇದಕ್ಕಾಗಿ ಮುಂಗಡ ಹಣ ವೆಚ್ಚಗೊಳಿಸಿ ಯೋಜನೆ ಪೂರ್ಣತೆಗೆ ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ನುಡಿದರು. 

ಮಂಜೇಶ್ವರ ಬಂದರು ಉದ್ಘಾಟನೆ ಮೂಲಕ ಮೀನುಗಾರಿಕೆ ವಲಯಕ್ಕೆ ಹೊಸ ಹುರುಪು 

     ಮಂಜೇಶ್ವರ ಬಂದರು ಉದ್ಘಾಟನೆ ಮೂಲಕ ಮೀನುಗಾರಿಕೆ ವಲಯಕ್ಕೆ ಹೊಸ ಹುರುಪು ಲಭಿಸಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು. 

      ಗುರುವಾರ ನಡೆದ ಮಂಜೇಶ್ವರ ಬಂದರು ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

                  ಕುಂಬಳೆಯಿಂದ ತಲಪ್ಪಾಡಿ ವರೆಗಿನ ಮೀನುಗಾರರಿಗೆ ಇದು ಬಲುದೊಡ್ಡ ಫಲದಾಯಕವಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಆತಂಕಗೊಳ್ಳದೆ, ಮೀನುಗಾರಿಕೆಗೆ ತೆರಳಿದವರು ಸುರಕಷಿತವಾಗಿ ತೆರಳಲು ಪೂರಕವಾಗಿದೆ. 


                 ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಮಾತನಾಡಿ ಮಂಜೇಶ್ವರ ಬಂದರು ಮೀನುಗಾರರಿಗೆ ತುಂಬ ಪ್ರಯೋಜನಕಾರಿ. ಮುಗ್ಗಟ್ಟಿನ ಅವಧಿಯಲ್ಲಿ ರಾಜ್ಯ ಎದುರಿಸಬೇಕಾಗಿ ಬಂದಿದ್ದ ಎಲ್ಲ ಸಂದಿಗ್ಧತೆಗಳಲ್ಲೂ ಧೀರತೆ ಪ್ರದರ್ಶಿಸಿರುವ ಮೂನುಗಾರ ಜನಾಂಗಕ್ಕೆ ಸುರಕ್ಷಿತವಾಗಿ ಕಾಯಕ ನಡೆಸಲು ಈ ಬಂದರು ಪೂರಕವಾಗಿದೆ ಎಂದರು. 

        ಶಾಸಕ ಎಂ.ಸಿ.ಕಮರುದ್ದೀನ್ ಅವರು ಮಾತನಾಡಿ ಬಂದರು ಚಟುವಟಿಕೆ ಆರಂಭಗೊಳ್ಳುವ ಜೊತೆಗೆ ತತ್ಸಂಬಂಧಿ ವಲಯಗಳೂ ಪ್ರಾರಂಭವಾಗಬೇಕು. ರಾಜಕೀಯ ಭೇದ ಮರೆತು ಎಲ್ಲ ವಲಯದ ಜನ ಸಮಗ್ರ ಅಭಿವೃದ್ಧಿಗೆ ಹೆಗಲು ನೀಡಬೇಕು ಎಂದು ತಿಳಿಸಿದರು. 

      ಕೇರಳದ ಕರಾವಳಿಯ ಸೈನ್ಯಕ್ಕೆ ರಾಜ್ಯ ಸರಕಾರದ ಬೆಂಬಲ: ಮಂಜೇಶ್ವರ ಮೀನುಗಾರಿಕೆ ಬಂದರನ್ನು ಲೋಕಾರ್ಪಣೆ ಗೊಳಿಸಿದ ಮುಖ್ಯಮಂತ್ರಿ 

      ಕೇರಳದಲ್ಲಿ ತಲೆದೋರಿದ್ದ ನೆರೆ ಹಾವಳಿ ಸಹಿತ ವಿಕೋಪಗಳ ವೇಳೆ ಸಂರಕ್ಷಣೆಗೆ ಸಿದ್ಧವಾಗಿದ್ದ ಕರಾವಳಿಯ ಸೈನ್ಯ ಎಂದೇ ಖ್ಯಾತರಾಗಿರುವ ಮೀನುಗಾರ ಜನಾಂಗಕ್ಕೆ ರಾಜ್ಯ ಸರಕಾರದ ಬೆಂಬಲವಾಗಿ ಮಂಜೇಶ್ವರ ಮೀನುಗಾರಿಕೆ ಬಂದರನ್ನು ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೋಕಾರ್ಪಣೆ ನಡೆಸಿದರು. 

        ಬಂದರು ಸಚಿವೆ ಜೆ.ಮೆರ್ಸಿಕುಟ್ಟಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ.ಕಮರುದ್ದೀನ್ ಮುಖ್ಯ ಅತಿಥಿಯಾಗಿದ್ದರು. ಬಂದರು ಇಲಾಖೆ ಕಾರ್ಯದರ್ಶಿ ಟಿಂಕು ಬಿಸ್ವಾಲ್, ಪ್ರಧಾನ ಇಂಜಿನಿಯರ್ ಬಿ.ಟಿ.ವಿ.ಕೃಷ್ಣನ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಪಿ.ವಿ.ಸತೀಶನ್, ಹಾರ್ಬರ್ ಇಂಜಿನಿಯರಿಂಗ್ ವರಿಷ್ಠಾಧಿಕಾರಿ ಕುಂಞï ಮಮ್ಮು ಪರವತ್, ವಿಭಾಗೀಯ ಕಾರ್ಯಕಾರಿ ಇಂಜಿನಿಯರ್ ಎ.ಮುಹಮ್ಮದ್ ಅಶ್ರಫ್, ಮತ್ಸ್ಯ ಫೆಡ್ ಪ್ರತಿನಿಧಿ ಕಾಟ್ಟಾಡಿ ಕುಮಾರನ್, ಜನಪ್ರತಿನಿಧಿಗಳು, ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಸಂಹಿತೆ ಪಾಲಿಸುವ ಮೂಲಕ ಸಮಾರಂಭ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries