ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಖ್ಯಾತ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ, ಕಾದಂಬರಿಕಾರ ಡಾ.ಕೋಟ ಶಿವರಾಮ ಕಾರಂತ ಅವರ ಹುಟ್ಟುಹಬ್ಬ ಕಾರ್ಯಕ್ರಮ ಶನಿವಾರ ಮಂಗಳೂರು ಕೊಡೊಯಾಲ್ ಗುತ್ತು ಜನತಾ ಡಿಲಕ್ಸ್ ನ ಪತ್ತುಮುಡಿ ಸೌಧದಲ್ಲಿ ನಡೆಯಿತು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಗರಪಾಲಿಕೆಯ ಮಹಾಪೌರ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ವಿಧಾನ ಪರಿಷತ್ತು ಮಾಜಿ ಸದಸ್ಯ ಕ್ಯಾಪ್ಟನ್.ಗಣೇಶ ಕಾರ್ಣಿಕ್ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್.ಎಡಪಡಿತ್ತಾಯ ಅವರು ಸಾಧಕರಿಗೆ ಪ್ರಶಸ್ತಿ ಪ್ರಧಾನಗೈದರು. ಪ್ರಸ್ತುತ ಸಾಲಿನ ಕಾರಂತ ಪ್ರಶಸ್ತಿಯನ್ನು ಪಡಾರು ಮಹಾಬಲೇಶ್ವರ ಭಟ್ ಅವರಿಗೆ ಈ ಸಂದರ್ಭ ಪ್ರದಾನಗೈಯ್ಯಲಾಯಿತು. ಕಲ್ಕೂರ ಕಾರಂತ ಹುಟ್ಟುಹಬ್ಬ ಕಲಾಸೇವಾ ಪ್ರಶಸ್ತಿಯನ್ನು ಗಡಿನಾಡು ಕಾಸರಗೋಡಿನ ಖ್ಯಾತ ಭಜನಾ ಸಂಕೀರ್ತನಕಾರ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ನೀಡಲಾಯಿತು. ಕಲ್ಕೂರ ಯುವ ಸಾಧನಾ ಪ್ರಶಸ್ತಿಗೆ ಅಕ್ಷತಾ ಪೂಜಾರಿ ಬೋಳ ಅವರಿಗೆ ಕೊಡಮಾಡಲಾಯಿತು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಅವರು ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು.