ತಿರುವನಂತಪುರ: ಕೋವಿಡ್ ನಂತರದ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯು ಪೆÇೀಸ್ಟ್ ಕೋವಿಡ್ ಆರೈಕೆ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದರು.
ಕೋವಿಡ್ ಚಿಕಿತ್ಸೆಯ ಬಳಿಕದ ಆರೈಕೆ, ಚಿಕಿತ್ಸೆಗಳ ಮಹತ್ವವನ್ನು ಈಗಾಗಲೇ ತಿಳಿಸಲಾಗಿದೆ. ಕೋವಿಡ್ ಸೋಂಕಿನ ಪ್ರಾರಂಭದ ಬಳಿಕ ರೋಗಿಗಳಿಗೆ ಉತ್ತಮ ಆರೈಕೆಯ ಅಗತ್ಯವಿರುತ್ತದೆ. ಆರೋಗ್ಯ ಇಲಾಖೆಯು ಅಗತ್ಯವಾದ ಪೆÇೀಸ್ಟ್ ಕೋವಿಡ್ ಆರೈಕೆ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ನಿರ್ಮಿಸಲಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು. ಟೆಲಿಮೆಡಿಸಿನ್ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ನಿನ್ನೆ ಸಂಜೆಯ ಕೋವಿಡ್ ಪರಿಶೀಲನಾ ಸಭೆಯ ನಂತರ ಸಿಎಂ ಮಾಧ್ಯಮಗಳ ಭೇಟಿಯ ವೇಳೆ ಈ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆಯ ಹೆಚ್ಚಳದಿಂದಾಗಿ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ 5790. ಅದಕ್ಕೆ ತಕ್ಕಂತೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಮಿಲಿಯನ್ ರಾಜ್ಯದಲ್ಲಿ ಪ್ರಸ್ತುತ 123524 ಪರೀಕ್ಷೆ ನಡೆಸಲಾಗುತ್ತಿದೆ. ಭಾರತದಲ್ಲಿ ಇದು 76440 ಆಗಿದೆ. ಬುಧವಾರದ ತನಕ ಸಕ್ರಿಯವಾಗಿರುವ ಪ್ರಕರಣಗಳಲ್ಲಿ 3885 ಜನರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಎರಡನೇ ಹಂತದ ಚಿಕಿತ್ಸಾ ಕೇಂದ್ರಗಳಲ್ಲಿ ಪ್ರಸ್ತುತ 2786 ರೋಗಿಗಳು, ಮೊದಲ ಸಾಲಿನ ಚಿಕಿತ್ಸಾ ಕೇಂದ್ರಗಳಲ್ಲಿ 10478 ಮತ್ತು ದೇಶೀಯ ಆರೈಕೆ ಕೇಂದ್ರಗಳಲ್ಲಿ 1495 ರೋಗಿಗಳಿದ್ದಾರೆ. 62,448 ಜನರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂ ಹೇಳಿದರು.