ನವದೆಹಲಿ: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಎತ್ತುವ ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ನೇರವಾಗಿ ಭಾಗಿಯಾಗಿದೆ ಎಂದು ಕೇಂದ್ರ ಸಚಿವ ವಿ ಮುರಲೀಧರನ್ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ನಿರಂತರವಾಗಿ ಬದಲಾಯಿಸುತ್ತಿದ್ದಾರೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೊದಲು ಪಿಣರಾಯಿ ವಿಜಯನ್ ತನಗೆ ಸ್ವಪ್ನಾ ಯಾರೆಂದು ಗೊತ್ತಿಲ್ಲ ಎಂದಿದ್ದರು. ಬಳಿಕ ಅವರು ಕಾನ್ಸುಲೇಟ್ ಜನರಲ್ ಅವರೊಂದಿಗೆ ಸ್ವಪ್ನಾ ಕಚೇರಿಗೆ ಬಂದಿದ್ದರು ಎಂದು ಹೇಳಿದರು. ಹಾಗಿದ್ದರೆ ವಿರೋಧಾಭಾಸದ ಹೇಳಿಕೆಗಳ ಅರ್ಥವಾದರೂ ಏನು ಎಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುರಲೀಧರನ್ ಪ್ರಶ್ನಿಸಿದರು.
ಈ ಪ್ರಕರಣದ ಆರೋಪಿಗಳ ಉನ್ನತ ಸ್ಥಾನವು ಮಾಜಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರಿಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು. ಇಡೀ ಘಟನೆಗೆ ಮುಖ್ಯಮಂತ್ರಿ ನೈತಿಕ ಹೊಣೆಗಾರಿಕೆಯನ್ನು ವಹಿಸಿ ರಾಜೀನಾಮೆ ನೀಡಬೇಕು ಎಂದು ಮುರಲೀಧರನ್ ಒತ್ತಾಯಿಸಿದರು.
ಪ್ರಕರಣವನ್ನು ಕೇಂದ್ರ ಸಂಸ್ಥೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಮುಖ್ಯಮಂತ್ರಿ, ತನಿಖೆ ಮುಂದುವರೆದಂತೆ ಇದು ರಾಜಕೀಯ ತಂತ್ರ ಎಂದು ಹೇಳಿರುವರು. ಮುಖ್ಯಮಂತ್ರಿ ಪ್ರಧಾನಿಗೆ ಕಳುಹಿಸಿದ ಪತ್ರದಲ್ಲಿ, ಕೇಂದ್ರ ಸಂಸ್ಥೆ ತನಿಖೆ ನಡೆಸಬೇಕು ಎಂದು ಮಾತ್ರ ಹೇಳಲಾಗಿದೆ. ಯಾವ ಸಂಸ್ಥೆ ಎಂಬುದು ಸ್ಪಷ್ಟಪಡಿಸಿರಲಿಲ್ಲ. ವಿಚಾರಣೆಗೆ ಒತ್ತಾಯಿಸಿದವರು ಸಿಬಿಐ ತನಿಖೆಯ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದರು.