HEALTH TIPS

ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಇನ್ನು ಸ್ಲೀಪರ್ ಬೋಗಿಗಳಿರದು-ಸ್ಲೀಪರ್ ಬೋಗಿಗಳನ್ನು ಹಂತಹಂತವಾಗಿ ತೆಗೆದು ಆಗಲಿವೆ ಸಂಪೂರ್ಣ ಎಸಿ ಬೋಗಿಗಳು!

    

            ಕೊಚ್ಚಿ: ಮುಂದಿನ ದಿನಗಳಲ್ಲಿ ಮೈಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಬೋಗಿಗಳು ಇರುವುದಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಸ್ಲೀಪರ್ ಬೋಗಿಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು ಮತ್ತು ಪೂರ್ಣ ಎಸಿ ಬೋಗಿಗಳನ್ನು ಹೊಂದಿರುವ ರೈಲುಗಳನ್ನು ಓಡಿಸಲಾಗುವುದು ಎಂದು ಹೇಳಿದರು.

       ಹೊಸ ಎಸಿ ಟೂರಿಸ್ಟ್ ಕ್ಲಾಸ್ ಬಂಡಿಗಳು 83 ಬರ್ತ್‍ಗಳನ್ನು ಹೊಂದಿದ್ದರೆ ಸ್ಲೀಪರ್‍ಗೆ 72 ಬರ್ತ್‍ಗಳಿರಲಿವೆ. ಬರ್ತ್‍ಗಳ ಸಂಖ್ಯೆ ಹೆಚ್ಚಳಗೊಳ್ಳುವುದರಿಂದ ದರಗಳು ಗಮನಾರ್ಹವಾಗಿ ಹೆಚ್ಚಳಗೊಳ್ಳುವುದಿಲ್ಲ ಮತ್ತು ಹೊಸ ವರ್ಗದ ದರಗಳು ಥರ್ಡ್ ಎಸಿ ಮತ್ತು ಸ್ಲೀಪರ್‍ಗಳ ನಡುವೆ ಇರುತ್ತವೆ ಎಂದು ಅವರು ಹೇಳಿದರು.

       ಪ್ರಯಾಣಿಕರ ರೈಲುಗಳಲ್ಲಿ ಸ್ಲೀಪರ್ ಬೋಗಿಗಳು ಮತ್ತು ಸಾಮಾನ್ಯ ಬೋಗಿಗಳು ಇರುತ್ತವೆ. ಹೊಸ ಮಾನದಮಡಗಳು ಮೈಲ್ ಮತ್ತು ಎಕ್ಸ್‍ಪ್ರೆಸ್ ರೈಲುಗಳ ವೇಗವನ್ನು 2023 ರಲ್ಲಿ ಗಂಟೆಗೆ 130 ಕಿ.ಮೀ ಮತ್ತು 2025 ರಲ್ಲಿ ಗಂಟೆಗೆ 160 ಕಿ.ಮೀ.ಗೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ. ರೈಲುಗಳ ವೇಗ ಹೆಚ್ಚಿದಂತೆ ಧೂಳು ಮತ್ತು ಗಾಳಿಯು ಎಸಿ ಅಲ್ಲದ ಬೋಗಿಗಳ ಪ್ರಯಾಣವನ್ನು ಕಷ್ಟಕರವಾಗಿಸುತ್ತದೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅವರು ವಿವರಿಸಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries